ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳವಾರ ಸಂಜೆ ಕೆಪಿಎಸ್‌ಸಿ ಪರೀಕ್ಷೆಗಳ ಫಲಿತಾಂಶ

By Staff
|
Google Oneindia Kannada News

ಮಂಗಳವಾರ ಸಂಜೆ ಕೆಪಿಎಸ್‌ಸಿ ಪರೀಕ್ಷೆಗಳ ಫಲಿತಾಂಶ
ಬುಧವಾರ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯ - ಡಾ.ಹೆಚ್‌.ಎನ್‌.ಕೃಷ್ಣ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗವು ಸಹಾಯಕರು, ಪ್ರಥಮ ದರ್ಜೆ ಸಹಾಯಕರು ಮತ್ತು ಗೆಜೆಟೆಡ್‌ ಪ್ರೊಬೆಷನರಿ ಹುದ್ದೆ ಪರೀಕ್ಷೆಗಳ ಫಲಿತಾಂಶವನ್ನು ಮಂಗಳವಾರ ಸಂಜೆ ಪ್ರಕಟಿಸಿದೆ.

2004 ಸೆಪ್ಟೆಂಬರ್‌ ತಿಂಗಳಿನಲ್ಲಿ ಸಹಾಯಕರ ಹುದ್ದೆಗೆ, 2005ರಲ್ಲಿ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ನೇಮಕಾತಿಗೆ ಸಂಬಂಧಿಸಿದಂತೆ ಆಯೋಗವು ಪ್ರವೇಶ ಪರೀಕ್ಷೆಯನ್ನು ನಡೆಸಿತ್ತು. ಲಕ್ಷಾಂತರ ಮಂದಿ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.

ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳು ಮತ್ತು ಪರೀಕ್ಷೆಯ ಸರಿ ಉತ್ತರಗಳು ಆಯೋಗದ ವೆಬ್‌ಸೈಟ್‌ http://kpsc.kar.nic.in/index.htmನಲ್ಲಿ ಮತ್ತು ಜಿಲ್ಲಾವಾರು ಡಿಡಿಪಿಐ ಕಚೇರಿಗಳಲ್ಲಿ ಬುಧವಾರ ಲಭ್ಯ ಎಂದು ಕೆ.ಪಿ.ಎಸ್‌.ಸಿ. ಅಧ್ಯಕ್ಷ ಡಾ. ಹೆಚ್‌.ಎನ್‌.ಕೃಷ್ಣ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X