ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಬೇಕೇ?

By Staff
|
Google Oneindia Kannada News

ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಬೇಕೇ?
ವಿಜೇತರಿಗೆ ‘ಬಾಲಕಲಾ ನಿಪುಣ’,‘ಬಾಲಕಲಾ ಪ್ರವೀಣ’,‘ಬಾಲಕಲಾ ಮಿತ್ರ’ ಪ್ರಶಸ್ತಿ ಗೌರವ...

ಬೆಂಗಳೂರು : ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿರುವ ಕಲಾ ಪ್ರತಿಭೆಯನ್ನು ಹೊರತರುವ ಉದ್ದೇಶದಿಂದ ಚಿತ್ರಕಲಾ ಅಕಾಡೆಮಿಯು ‘2005ರ ದ್ವೀತಿಯ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ’ಯನ್ನು ಏರ್ಪಡಿಸಿದೆ.

ಎಲ್ಲಾ ಸ್ಪರ್ಧೆಗಳಲ್ಲೂ ನಿಯಮಗಳಿರುವಂತೆ ಈ ಸ್ಪರ್ಧೆಯಲ್ಲೂ ಕೆಲವು ನಿಯಮಗಳನ್ನು ಇಡಲಾಗಿದೆ. ಈ ಸ್ಪರ್ಧೆಯಲ್ಲಿ ಮೂರು ವಿಭಾಗಗಳನ್ನು ಮಾಡಲಾಗಿದೆ.

ಅತಿ ಕಿರಿಯ ವಿಭಾಗ : 1ರಿಂದ 5ನೇ ತರಗತಿಯ ವಿದ್ಯಾರ್ಥಿಗಳು
ಕಿರಿಯ ವಿಭಾಗ : 6ರಿಂದ 8ನೇ ತರಗತಿಯ ವಿದ್ಯಾರ್ಥಿಗಳು
ಹಿರಿಯ ವಿಭಾಗ : 9ರಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳು

ಸ್ಪರ್ಧೆಯ ನಿಯಮಗಳು :

  • ಈ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು 50ರೂ ಪ್ರವೇಶ ಶುಲ್ಕದೊಡನೆ ತಮ್ಮ ಒಂದು ಅಥವಾ ಎರಡು ಕಲಾಕೃತಿಗಳನ್ನು ಶಾಲಾ-ಕಾಲೇಜು ಮುಖಾಂತರ ಕಳುಹಿಸಬೇಕು.

  • ಪ್ರವೇಶ ಶುಲ್ಕವು ಬ್ಯಾಂಕ್‌ ಡಿಮಾಂಡ್‌ ಡ್ರಾಫ್ಟ್‌ ಮೂಲಕ ಚಿತ್ರಕಲಾ ಅಕಾಡೆಮಿ, ಬೆಂಗಳೂರು ಇವರಿಗೆ ಸಂದಾಯವಾಗುವಂತೆ ಸಲ್ಲಿಸಿರಬೇಕು.

  • ವಿದ್ಯಾರ್ಥಿಗಳು ತಮಗಿಷ್ಟವಾದ ಯಾವುದೇ ವಿಷಯವನ್ನಾಧರಿಸಿ11್ಡ14ಇಂಚಿನ ಡ್ರಾಯಿಂಗ್‌ ಪೇಪರ್‌ನಲ್ಲಿ ಕಲಾಕೃತಿ ರಚಿಸಿ, ನವೆಂಬರ್‌ 15ರೊಳಗಾಗಿ ಕೊರಿಯರ್‌ ಅಥವಾ ಅಂಚೆ ಮೂಲಕ ಕಳುಹಿಸಬೇಕು.
  • ಪ್ರಶಸ್ತಿ ವಿಜೇತರ ಹೆಸರನ್ನು ಆಯಾ ಶಾಲಾಕಾಲೇಜುಗಳಿಗೆ ಕಳುಹಿಸಲಾಗುವುದು. ಆಯಾ ವಿಭಾಗದಲ್ಲಿ ವಿಜೇತರಾದ ವಿಜೇತರಿಗೆ ಚಿನ್ನ,ಬೆಳ್ಳಿ ಹಾಗೂ ಕಂಚಿನ ಪದಕ(ಲೇಪ)ಗಳೊಂದಿಗೆ ಕ್ರವಾಗಿ‘ಬಾಲಕಲಾ ನಿಪುಣ’,‘ಬಾಲಕಲಾ ಪ್ರವೀಣ’ ಹಾಗೂ‘ಬಾಲಕಲಾ ಮಿತ್ರ’ ಪ್ರಶಸ್ತಿ ನೀಡಲಾಗುವುದು.

    ಡಿಸೆಂಬರ್‌ 12ರಂದು ಬೆಳಿಗ್ಗೆ 10ಗಂಟೆಗೆ ಬಸವನ ಗುಡಿಯ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ವಿಜೇತರಿಗೆ ಪ್ರದಾನ ಮಾಡಲಾಗುವುದು.

    (ಇನ್ಫೋ ವಾರ್ತೆ)

    ಮುಖಪುಟ / ವಾರ್ತೆಗಳು

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X