ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರ್ಜಾಲದಲ್ಲಿ ಆಪ್ತ ನುಡಿ : ‘ವಾಯ್ಸ್‌ ಇ-ಮೇಲ್‌’ ರೆಡಿ

By Staff
|
Google Oneindia Kannada News

ಅಂತರ್ಜಾಲದಲ್ಲಿ ಆಪ್ತ ನುಡಿ : ‘ವಾಯ್ಸ್‌ ಇ-ಮೇಲ್‌’ ರೆಡಿ
ವಿಶ್ವದ ಮೊದಲ ವಾಯ್ಸ್‌ ಇ-ಮೇಲ್‌ ; ಇದು ಭಾರತದ ಹೆಗ್ಗಳಿಕೆ

ಹೈದರಾಬಾದ್‌ : ನಗರದ ನೌಪಾಸ್‌(ನೌ ಪಾಸಿಬಲ್‌) ಆನ್‌ಲೈನ್‌ ಸರ್ವೀಸಸ್‌ ಸಂಸ್ಥೆಯು ಜಗತ್ತಿನ ಮೊಟ್ಟಮೊದಲ ವಾಯ್ಸ್‌ ಇ-ಮೇಲ್‌(ಧ್ವನಿ ಅಂಚೆ) ಅಭಿವೃದ್ಧಿಪಡಿಸಿದೆ.

ಸುದ್ದಿಗಾರರೊಂದಿಗೆ ಈ ಬಗ್ಗೆ ಶನಿವಾರ ಮಾತನಾಡುತ್ತಿದ್ದ ಸಂಸ್ಥೆಯ ಮುಖ್ಯಸ್ಥ ಅಯ್ಯಪ್ಪ ನಾಗು, ಮುಂದಿನ ಮೂರು ವಾರಗಳ ಒಳಗೆ ಈ ಸೇವೆ ಆರಂಭವಾಗಲಿದೆ ಎಂದರು.

ಈ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಒಟ್ಟು ಒಂಭತ್ತು ತಿಂಗಳು ಹಿಡಿದವು. ಇದರ ಮೂಲಕ ಬಳಕೆದಾರರು ಧ್ವನಿ ಮುದ್ರಿಸಿ, ಅಂಚೆ ಸಂದೇಶ ಕಳುಹಿಸಬಹುದು. ಇದು ಉಚಿತ ಸೇವೆಯಾಗಿದೆ. ಅಂಚೆ ಕಳುಹಿಸುವವರು ನೌಪಾಸ್‌ನೊಂದಿಗೆ ನೋಂದಣಿ ಮಾಡಿಕೊಳ್ಳಬೇಕು. ಅಂಚೆ ಸ್ವೀಕರಿಸುವವರಿಗೆ ನೋಂದಣಿಯ ಅಗತ್ಯವಿಲ್ಲ ಎಂದು ವಿವರಿಸಿದರು.

ನೌಪಾಸ್‌ ಸಂಸ್ಥೆಯು, ಟ್ರ್ಯೂಲಿ ಇಂಟಲಿಜೆಂಟ್‌ ಟೆಕ್ನಾಲಜೀಸ್‌ ಪ್ರೆೃವೇಟ್‌ ಲಿಮಿಟೆಡ್‌ನ ಉಪಸಂಸ್ಥೆಯಾಗಿದೆ.

(ಏಜನ್ಸೀಸ್‌)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X