ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮ್ಮನೊಂದಿಗೆ ರೌಡಿ ತನ್ವೀರ್‌ನ ರಂಜಾನ್‌ ಸಡಗರ

By Staff
|
Google Oneindia Kannada News

ಅಮ್ಮನೊಂದಿಗೆ ರೌಡಿ ತನ್ವೀರ್‌ನ ರಂಜಾನ್‌ ಸಡಗರ
ಕೇಂದ್ರ ಕಾರಾಗೃಹದಲ್ಲಿ ಈದ್‌ ಆಚರಣೆ, ವಿಶೇಷ ಭೋಜನ

ಬೆಂಗಳೂರು : ರಂಜಾನ್‌ ಹಬ್ಬದ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ಅನುಮತಿ ಪಡೆದಿದ್ದ ಕುಖ್ಯಾತ ರೌಡಿ ತನ್ವೀರ್‌ ತನ್ನ ಮನೆಗೆ ತೆರಳಿ, ಸಂಜೆಯ ತನಕ ಹಬ್ಬದ ಸಂಭ್ರಮವನ್ನು ಸವಿದ ಘಟನೆ ವರದಿಯಾಗಿದೆ.

ನ್ಯಾಯಾಯಲದ ಆದೇಶದನ್ವಯ ತನ್ವೀರ್‌ ಸೇರಿದಂತೆ ಆರುಮಂದಿ ಕೈದಿಗಳು ಕಾರಾಗೃಹದಿಂದ ಹೊರ ಬಂದು , ತಮ್ಮ ಮನೆಗೆ ಭೇಟಿ ನೀಡಿದರು. ತನ್ನ ಅಮ್ಮನೊಂದಿಗೆ ಹಬ್ಬ ಆಚರಿಸಿದ ತನ್ವೀರ್‌ನನ್ನು ಸಂಜೆ ಆರು ಗಂಟೆಗೆ ಪೋಲಿಸರು ಕಾರಾಗೃಹಕ್ಕೆ ವಾಪಸ್‌ ಕರೆತಂದರು.

ಈದ್‌ ಆಚರಣೆ : ಕೇಂದ್ರ ಕಾರಾಗೃಹದಲ್ಲಿ ರಂಜಾನ್‌ ಹಿನ್ನೆಲೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. 800ಮಂದಿ ಮುಸ್ಲಿಂ ಕೈದಿಗಳು ಪಾಲ್ಗೊಂಡಿದ್ದರು. ಸಾಮೂಹಿಕ ಪ್ರಾರ್ಥನೆ, ವಿಶೇಷ ಭೋಜನವನ್ನು ಈ ಸಂದರ್ಭದಲ್ಲಿ ಏರ್ಪಡಿಸಲಾಗಿತ್ತು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X