ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಕಿಗಳ ಆಟ ‘ಸುಡೊಕು’ ಬಿಬಿಸಿ ಚಾನೆಲ್‌ನಲ್ಲಿ ಹುಡುಕು!

By Staff
|
Google Oneindia Kannada News

ಅಂಕಿಗಳ ಆಟ ‘ಸುಡೊಕು’ ಬಿಬಿಸಿ ಚಾನೆಲ್‌ನಲ್ಲಿ ಹುಡುಕು!
ಅರ್ಧ ಗಂಟೆ ಕಾಲದ 10 ಕಂತುಗಳ ಪ್ರಸಾರ, ರಸಪ್ರಶ್ನೆ ಮಾದರಿಯಲ್ಲಿ ಸ್ಪರ್ಧೆ...

ಲಂಡನ್‌ : ಜಪಾನೀಯರ ಸಂಖ್ಯಾಬಂಧ(ಸಂಖ್ಯಾಮೋಜು)ದ ಆಟ ಸುಡೊಕು ಇದೀಗ ಟೀವಿಯನ್ನು ಪ್ರವೇಶಮಾಡುವ ತಯಾರಿಯಲ್ಲಿದೆ.

ಬಿಬಿಸಿ ಚಾನೆಲ್‌ ಸುಡೊ-ಕ್ಯೂ ಎಂಬ ಕಾರ್ಯಕ್ರಮದ ಮೂಲಕ ಈ ಆಟವನ್ನು ಪ್ರಸಾರ ಮಾಡಲಿದೆ. ಆಟದಲ್ಲಿ ಒಟ್ಟು ಮೂರು ತಂಡಗಳು ಭಾಗವಹಿಸವರು.

ಪ್ರತಿ ತಂಡದಲ್ಲಿ ಮೂವರು ಸದಸ್ಯರಿರುತ್ತಾರೆ. ಆದರೆ ಆಟ ಪೂರ್ತಿಯಾಗಿ ಸುಡೊಕುಮಯ ಆಗಿರುವುದಿಲ್ಲ. ಮೊದಲು ಸಾಮಾನ್ಯ ಜ್ಞಾನದ ಕುರಿತು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಆಮೇಲಷ್ಟೆ ಸಂಖ್ಯಾಬಂಧ(ಸುಡೊಕು) ಮಾಡಬೇಕಾಗುತ್ತದೆ.

ಈ ಕಾರ್ಯಕ್ರಮವು ಅರ್ಧಗಂಟೆ ಅವಧಿಯ ಒಟ್ಟು ಹತ್ತು ಕಂತುಗಳನ್ನು ಒಳಗೊಂಡಿದ್ದು, ಕ್ರಿಸ್‌ಮಸ್‌ಗಿಂತ ಮೊದಲು ಬರುವ ಪಾಕ್ಷಿಕದಲ್ಲಿ ಪ್ರಸಾರವಾಗಲಿದೆ. ವಾರದ ದಿನಗಳ ಊಟದ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಬಿತ್ತರಗೊಳ್ಳಲಿದೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X