• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನ.13ರಿಂದ ನಗರದಲ್ಲಿ ‘ಮಹಾಭಾರತ ಉತ್ಸವ’ ಆರಂಭ

By Staff
|

ನ.13ರಿಂದ ನಗರದಲ್ಲಿ ‘ಮಹಾಭಾರತ ಉತ್ಸವ’ ಆರಂಭ

ಮಹಾಭಾರತಕ್ಕೆ ಸಂಬಂಧಿಸಿದ ವಿನೂತನ ಪ್ರಯೋಗಾಲಕ್ಕೆ ರಾಷ್ಟ್ರಪತಿಗಳಿಂದ ಚಾಲನೆ

ಬೆಂಗಳೂರು : ಭಾರತೀಯ ಸಂಸ್ಕೃತಿ ಪ್ರತಿಬಿಂಬಿಸುವ ನಿಟ್ಟಿನಲ್ಲಿ ಮಹಾಭಾರತ ಸಂಶೋಧನಾ ಪ್ರತಿಷ್ಠಾನ ನಗರದಲ್ಲಿ ನವೆಂಬರ್‌ 13ರಿಂದ 21ರವರೆಗೆ ‘ಮಹಾಭಾರತ’ ಉತ್ಸವವನ್ನು ಆಯೋಜಿಸಿದೆ.

ನಗರದ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಒಂಬತ್ತು ದಿನಗಳ ಕಾಲ ನಡೆಯುವ ಉತ್ಸವವನ್ನು ರಾಜ್ಯಪಾಲ ಟಿ.ಎನ್‌.ಚತುರ್ವೇದಿ ಉದ್ಘಾಟಿಸುವರು.

ಮಹಾಗ್ರಂಥ ಮಹಾಭಾರತವನ್ನು ಜನತೆಯ ಬಳಿಗೆ ಕೊಂಡೊಯ್ಯುವ ಉದ್ದೇಶ ಉತ್ಸವದ್ದಾಗಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶ. ಛತ್ತೀಸ್‌ಗಢದ ಕಲಾವಿದೆ ಪದ್ಮಾಶ್ರೀ ತೇಜನ್‌ ಬಾಯಿ ಸೇರಿದಂತೆ ಮಹಾಭಾರತಕ್ಕೆ ಸಂಬಂಧಿಸಿದಂತೆ ವಿವಿಧ ಕಲಾಪ್ರಕಾರಗಳಲ್ಲಿ ಸಾಧನೆಗೈದ ಕಲಾವಿದರು ಉತ್ಸವದಲ್ಲಿ ಪಾಲ್ಗೊಳ್ಳುವರು.

ಪ್ರದರ್ಶನ, ಉಪನ್ಯಾಸ, ವಿಚಾರ ಸಂಕಿರಣ , ಕ್ವಿಜ್‌ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕುರುಕ್ಷೇತ್ರದಲ್ಲಿ ಉತ್ಖನನ ಮಾಡಿದಾಗ ದೊರೆತ ಆಯುಧ, ಪ್ರಾಚೀನ ಹಸ್ತಪ್ರತಿಗಳ ವಸ್ತು ಪ್ರದರ್ಶನವೂ ಉಂಟು ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಡಿ.ಪ್ರಹ್ಲಾದ ರಾವ್‌ ತಿಳಿಸಿದ್ದಾರೆ.

ಮಹಾಭಾರತದ ಎಲ್ಲ ಹಸ್ತಪ್ರತಿಗಳನ್ನು ಸಂಗ್ರಹಿಸಿ, ಗಣಕೀಕರಣಗೊಳಿಸಿ, ಸಂರಕ್ಷಿಸುವ ಪ್ರಯೋಗಾಲಯವನ್ನು ಮಹಾಭಾರತ ಸಂಶೋಧನಾ ಪ್ರತಿಷ್ಠಾನ ರೂಪಿಸಿದೆ. ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್‌ ಕಲಾಂ ನ.21ರಂದು ಪ್ರಯೋಗಾಲಯವನ್ನು ರಾಷ್ಟ್ರಕ್ಕೆ ಸಮರ್ಪಿಸುವರು. ಈ ಹಿನ್ನೆಲೆಯಲ್ಲಿ ರಾಷ್ಟ್ರಮಟ್ಟದ ಮಹಾಭಾರತ ಉತ್ಸವವನ್ನು ಪ್ರತಿಷ್ಠಾನ ಹಮ್ಮಿಕೊಂಡಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more