ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಟಾಕಿ ಢಂ ಢಂನಿಂದ ನಗರದ 40ಮಂದಿಗೆ ಗಾಯ

By Staff
|
Google Oneindia Kannada News

ಪಟಾಕಿ ಢಂ ಢಂನಿಂದ ನಗರದ 40ಮಂದಿಗೆ ಗಾಯ
ಮಹಾಮಳೆಯ ಪರಿಣಾಮ ಶೇ.40ರಷ್ಟು ಪಟಾಕಿ ಮಾರಾಟ ಕುಸಿತ

ಬೆಂಗಳೂರು : ದೀಪಾವಳಿ ಸಂಭ್ರಮಕ್ಕೆ ತೆರೆಬಿದ್ದಿದೆ. ಆದರೆ ಪಟಾಕಿ ಸದ್ದು ಮಾತ್ರ ನಿಂತಿಲ್ಲ. ಕಳೆದ ಮೂರು ದಿನಗಳಲ್ಲಿ ನಗರದ ವಿವಿಧ ಭಾಗಗಳಲ್ಲಿನ 40ಮಂದಿ ಪಟಾಕಿ ಸಿಡಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪಟಾಕಿ ಸಿಡಿದು ಕಾಮಾಕ್ಷಿ ಪಾಳ್ಯದ 9ವರ್ಷದ ದಿವ್ಯಾ ಬುಧವಾರ ಮೃತಪಟ್ಟಿದ್ದಾಳೆ. ಮನೆಯವರು ಬೇಡ ಎಂದರೂ, ಅವರು ಊಟ ಮಾಡುವ ಸಂದರ್ಭದಲ್ಲಿ ಆನೆ ಪಟಾಕಿ ಹಚ್ಚಲು ರಸ್ತೆಗೆ ಹೋದ ದಿವ್ಯಾ, ಮತ್ತೆ ಮನೆಗೆ ಜೀವಂತವಾಗಿ ಮರಳಲಿಲ್ಲ!

ವಿಜಯನಗರದ ಆರ್‌ಪಿಸಿ ಬಡಾವಣೆಯ ಚೈತನ್ಯ ಕೃಷ್ಣನ್‌(3), ವಿಜಯನಗರದ ಪುಷ್ಟ(27), ಪುನೀತ್‌(30), ರಾಜಾಜಿ ನಗರದ ಬೃಂದಾ(7) ಸೇರಿದಂತೆ ನಗರದ ಸುತ್ತಮುತ್ತಲಿನ 16ಮಂದಿ ಬಲಿಪಾಡ್ಯಮಿಯಂದು ಪಟಾಕಿ ಸುಡುವಾಗ ಗಾಯಗೊಂಡಿದ್ದಾರೆ. ಆರು ಮಂದಿ ದೃಷ್ಠಿ ಕಳೆದುಕೊಂಡಿದ್ದಾರೆ.

ಪಟಾಕಿ ವ್ಯಾಪಾರ ಕುಸಿತ : ದೀಪಾವಳಿಯ ಪಟಾಕಿ ವ್ಯವಹಾರದ ಮೇಲೂ ಮಳೆ ತನ್ನ ಪರಿಣಾಮ ಬೀರಿದೆ. ಪ್ರತಿವರ್ಷಕ್ಕಿಂತಲೂ ಪಟಾಕಿ ಮಾರಾಟ ಶೇ.40ರಷ್ಟು ಕುಸಿದಿದೆ ಎನ್ನಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X