ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾತ್ಮ ಗಾಂಧಿ ರಸ್ತೆಯಲ್ಲಿ ವೇದಿಕೆಯಿಂದ ಕನ್ನಡ ಡಿಂಡಿಮ

By Staff
|
Google Oneindia Kannada News

ಮಹಾತ್ಮ ಗಾಂಧಿ ರಸ್ತೆಯಲ್ಲಿ ವೇದಿಕೆಯಿಂದ ಕನ್ನಡ ಡಿಂಡಿಮ
ಆಂಗ್ಲ ನಾಮಫಲಕಗಳಿಗೆ ಕುತ್ತು, ಮೂರು ಕಾರುಗಳು ಜಖಂ

ಬೆಂಗಳೂರು : ಕನ್ನಡ ಸದ್ದಿನ ನಡುವೆ ದೀಪಾವಳಿಯ ಪಟಾಕಿ ಸದ್ದು ಕ್ಷೀಣವಾಗಿತ್ತು ! ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ನಗರದ ವಿವಿಧ ಭಾಗಗಳಲ್ಲಿ ಇಂಗ್ಲಿಷ್‌ ನಾಮಫಲಕಗಳ ಮೇಲೆ ದಾಳಿ ನಡೆಸಿದರು.

ವೇದಿಕೆಯ ಸದಸ್ಯರು ಕನ್ನಡ ಪರ ಘೋಷಣೆಗಳನ್ನು ಕೂಗುತ್ತ, ನಗರದ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ , ಕಮರ್ಷಿಯಲ್‌ ಸ್ಟ್ರೀಟ್‌ ಮತ್ತು ಸ್ಯಾಂಕಿ ರಸ್ತೆಯಲ್ಲಿ ಕನ್ನಡ ಫಲಕಗಳಿಗೆ ಕಲ್ಲು ತೂರಿ ತಮ್ಮ ಅಸಮಾಧಾನವನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಸದಾಶಿವನಗರದ ಕಾರ್‌ ಶೋರೂಂನಲ್ಲಿದ್ದ ಮೂರು ಕಾರುಗಳು ಜಖಂಗೊಂಡಿವೆ.

ಮತ್ತೊಂದೆಡೆ ಕರ್ನಾಟಕ ಸಂರಕ್ಷಣಾ ಸಂಘ ಮಹಾತ್ಮ ಗಾಂಧಿ ರಸ್ತೆಯಲ್ಲಿ ಬೃಹತ್‌ಮೆರವಣಿಗೆಯನ್ನು ಆಯೋಜಿಸಿತ್ತು. ಸಂಘದ ಅಧ್ಯಕ್ಷ ಕನ್ನಡ ಸೋಮು ಈ ಸಂದರ್ಭದಲ್ಲಿ ಹಾಜರಿದ್ದರು. ನಾಡು-ನುಡಿ ಬಿಂಬಿಸುವ ಸ್ತಬ್ಧ ಚಿತ್ರಗಳು, ಹಾಡು-ಕುಣಿತ ಮತ್ತು ಪಟಾಕಿ ಸದ್ದಿನ ನಡುವೆ ಸಾಗಿಬಂದ ಮೆರವಣಿಗೆ ಕಂಡು, ಮಹಾತ್ಮ ಗಾಂಧಿ ರಸ್ತೆಯಲ್ಲಿದ್ದ ವಿದೇಶಿಯರು ಒಂದು ಕ್ಷಣ ಚಕಿತರಾದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X