ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿನಿವಿಂಕ್‌ ಪಂಗನಾಮ ಶಾಸ್ತ್ರಿ ಈಗ ಪೊಲೀಸರ ಅತಿಥಿ

By Staff
|
Google Oneindia Kannada News

ವಿನಿವಿಂಕ್‌ ಪಂಗನಾಮ ಶಾಸ್ತ್ರಿ ಈಗ ಪೊಲೀಸರ ಅತಿಥಿ
ಲ್ಯಾಪ್‌ಟಾಪ್‌, ವಿಡಿಯೋ ಹ್ಯಾಂಡಿಕ್ಯಾಮ್‌ಸೇರಿದಂತೆ 8ಕೋಟಿ ರೂ.ಮೌಲ್ಯದ ಆಸ್ತಿ ಜಪ್ತಿ

ಬೆಂಗಳೂರು : ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿದ್ದ ವಿನಿವಿಂಕ್‌ ಹಗರಣದ ಪ್ರಮುಖ ರೂವಾರಿ ಶ್ರೀನಿವಾಸ್‌ ಶಾಸ್ತ್ರಿಯನ್ನು ಸಿಸಿಬಿ ವಿಶೇಷ ತಂಡ ಆಂಧ್ರಪ್ರದೇಶದಲ್ಲಿ ಬಂಧಿಸಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ತಲೆಮರೆಸಿಕೊಂಡಿದ್ದ ವಿನಿವಿಂಕ್‌ ಶಾಸ್ತ್ರಿಯನ್ನು ನಾಲ್ಕು ತಿಂಗಳ ತೀವ್ರ ಶೋಧದ ಬಳಿಕ ಕೇಂದ್ರ ಅಪರಾಧ ಪತ್ತೆ ದಳ ಇತನನ್ನು ಬಂಧಿಸಿದೆ. ಆತನಿಂದ 15ಲಕ್ಷ ರೂ.ಮೊತ್ತದ ರಸೀದಿಗಳು, ಲ್ಯಾಪ್‌ಟಾಪ್‌, ವಿಡಿಯೋ ಹ್ಯಾಂಡಿಕ್ಯಾಮ್‌, ಮೂರು ಕ್ಯಾಮೆರಾ, 4,270ನಗದು ಹಾಗೂ 7ಲಕ್ಷ ರೂ.ಮೌಲ್ಯದ ಅಮೆರಿಕದ ಡಾಲರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಶಾಸ್ತ್ರೀಯ ಬಂಧನಕ್ಕಾಗಿ ನಗರ ಸಿಬಿಐ ಪೊಲೀಸರು ಆಂಧ್ರ ಪೊಲೀಸರ ನೆರವು ಪಡೆದಿದ್ದು, ಅಲ್ಲಿನ ನ್ಯಾಯಾಲಯದ ಅನುಮತಿ ಪಡೆದು ಶಾಸ್ತ್ರಿಯನ್ನು ಭಾನುವಾರ ಬೆಂಗಳೂರಿಗೆ ಕರೆತರಲಾಯಿತು. ನವೆಂಬರ್‌ 7 ರವರೆಗೆ ಸಿಸಿಬಿ ವಶಕ್ಕೆ ಒಪ್ಪಿಸಲಾಗಿದೆ ಎಂದು ನಗರ ಪೊಲೀಸ್‌ ಆಯ್ಕು ಡಾ.ಅಜಯ್‌ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.

ಹೇಗೆ ಸಿಕ್ಕಿ ಬಿದ್ದ ಟೋಪಿ ಶಾಸ್ತ್ರಿ ?

ಶಾಸ್ತ್ರಿ ಪ್ರತಿ ವರ್ಷ ತಪ್ಪದೇ ತನ್ನ ತಂದೆಯ ಶ್ರಾದ್ಧ ಮಾಡುತ್ತಿದ್ದನು. ಅಂದರಂತೆ ಈ ವರ್ಷವೂ ಆತ ಶ್ರಾದ್ಧ ಮಾಡುತ್ತಾನೆ ಎಂಬ ಊಹೆಯ ಮೇಲೆ ಪೊಲೀಸರು ವಿಶಾಖಪಟ್ಟಣದ ಎಲ್ಲಾ ದೇವಾಲಯಗಳ ಮೇಲೆ ಕಣ್ಣಿಡಲಾಗಿತ್ತು. ಒಬ್ಬ ಅರ್ಚಕ ಶಾಸ್ತ್ರಿಯ ಫೋಟೊ ಗುರುತಿಸಿ ಮಾಹಿತಿ ನೀಡಿದ. ಅದರನ್ವಯ ಪೊಲೀಸರು ಕಂಡಿದ್ದು ಚಿಕ್ಕ ಮನೆಯಲ್ಲಿ ಪೇಪರ್‌ ಓದುತ್ತ ಕುಳಿತಿದ್ದ ವಿನಿವಿಂಕ್‌ ಶಾಸ್ತ್ರಿ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X