ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಗನಕ್ಕೇರಿದ ಬಂಗಾರ, ಹೊಳಪಿಲ್ಲದ ದೀಪಾವಳಿ!

By Staff
|
Google Oneindia Kannada News

ಗಗನಕ್ಕೇರಿದ ಬಂಗಾರ, ಹೊಳಪಿಲ್ಲದ ದೀಪಾವಳಿ!
ನಿಮ್ಮ ಪತ್ನಿಯನ್ನೇ ಚಿನ್ನ ರನ್ನ ಎಂದು ರಮಿಸಿ ... ಈಗ ಉಳಿದಿರುವುದು ಅದೊಂದೆ ದಾರಿ...

ಮುಂಬಯಿ : ಬೆಳಕಿನ ಹಬ್ಬ ದೀಪಾವಳಿಯ ಬೆನ್ನಲ್ಲಿ ಹೊಳಪಿನ ಚಿನ್ನ ಖರೀದಿಸುವುದು ವಾಡಿಕೆ. ಆದರೆ ಗಗನಕ್ಕೇರಿರುವ ಚಿನ್ನದ ಬೆಲೆಯ ಕರಿನೆರಳು ಹಬ್ಬದ ಮೇಲೆ ಬಿದ್ದಿದೆ.

ಹತ್ತು ಗ್ರಾಂ ಚಿನ್ನಕ್ಕೆ ಶುಕ್ರವಾರ ಮಾರುಕಟ್ಟೆಯಲ್ಲಿ 7010ರೂ. ಆಗಿದೆ. ಒಂದೇ ದಿನದಲ್ಲಿ 30ರೂ. ಹೆಚ್ಚಳ ಕಂಡುಬಂದಿರುವುದು ಮತ್ತೊಂದು ವಿಶೇಷ. ಈ ವಾರವೊಂದರಲ್ಲಿಯೇ ಹತ್ತು ಗ್ರಾಂ ಚಿನ್ನಕ್ಕೆ 140ರೂ. ಹೆಚ್ಚಿದೆ. ಈ ಬೆಳವಣಿಗೆಯಿಂದ ಗ್ರಾಹಕರು ನಿರಾಸೆಗೊಂಡಿದ್ದಾರೆ.

ಹಬ್ಬ, ಮದುವೆ ಮತ್ತಿತರ ಶುಭಕಾರ್ಯಗಳ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಬಂದಿರುವುದೇ, ದಾಖಲೆಯ ಬೆಲೆ ಹೆಚ್ಚಳಕ್ಕೆ ಮೂಲ ಕಾರಣ. ಅಲ್ಲದೇ ವಿದೇಶಿ ಮಾರುಕಟ್ಟೆಯಲ್ಲೂ ಚಿನ್ನಕ್ಕೆ ಅಪಾರ ಬೇಡಿಕೆ ಕಂಡುಬಂದಿದೆ. ಬಂಗಾರದ ಬೆಲೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X