ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಮಳೆಗೆ ರಾಜ್ಯದ 8.71ಲಕ್ಷ ಮಂದಿ ಬೀದಿಪಾಲು

By Staff
|
Google Oneindia Kannada News

ಮಹಾಮಳೆಗೆ ರಾಜ್ಯದ 8.71ಲಕ್ಷ ಮಂದಿ ಬೀದಿಪಾಲು
1167ಕೋಟಿ ರೂ. ನೆರವಿಗೆ ಮನವಿ, ಕೇಂದ್ರದ ಮನವೊಲಿಸಲು ಸಚಿವರ ದೆಹಲಿ ಯಾತ್ರೆ

ಬೆಂಗಳೂರು : ಒಂದೆಡೆ ಕನ್ನಡ ರಾಜ್ಯೋತ್ಸವದ ಸಂಭ್ರಮ. ಮತ್ತೊಂದೆಡೆ ದೀಪಾವಳಿಯ ಬೆಳಕು. ಆದರೆ ಮಹಾಮಳೆಯ ಅಬ್ಬರಕ್ಕೆ ರಾಜ್ಯನಡುಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 2.43ಲಕ್ಷಮನೆಗಳು ವರುಣನ ಕೋಪಕ್ಕೆ ಕುಸಿದಿವೆ. 8.71ಲಕ್ಷಮಂದಿ ಸೂರು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.

ಇನ್ನು ಬೆಂಗಳೂರಿನಲ್ಲಿ 8000 ಮನೆಗಳು ಕುಸಿದಿದ್ದು, ಒಟ್ಟಾರೇ ಮಳೆ ನಷ್ಟವನ್ನು 500ಕೋಟಿ ರೂ. ಎಂದು ಅಂದಾಜು ಮಾಡಲಾಗಿದೆ. ನೆರೆ ಸಂತ್ರಸ್ತರಿಗೆ ನೆರವು ನೀಡುವ ಪ್ರಯತ್ನಗಳು ಮುಂದುವರೆದಿವೆ.

ರಾಜ್ಯದ ನೆರೆ ಸಂತ್ರಸ್ತರ ಕಲ್ಯಾಣಕ್ಕಾಗಿ 1167ಕೋಟಿ ರೂ. ಪರಿಹಾರ ನೀಡಬೇಕೆಂದು ರಾಜ್ಯ ಸರ್ಕಾರ ಮನವಿ ಸಲ್ಲಿಸಿದೆ. ಈ ನಿಟ್ಟಿನಲ್ಲಿ ಮನವೊಲಿಸಲು ಪ್ರಧಾನಿ ಡಾ.ಮನಮೋಹನ ಸಿಂಗ್‌, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಗೃಹಸಚಿವ ಶಿವರಾಜ್‌ ಪಾಚೀಲ್‌, ಕೃಷಿ ಸಚಿವ ಶರತ್‌ ಪವಾರ್‌ ಅವರನ್ನು ರಾಜ್ಯ ಸಂಪುಟದ ನಿಯೋಗ ಅ.31ರಂದು ಭೇಟಿ ಮಾಡಲಿದೆ.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X