ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗರದಲ್ಲಿ ಹಾರ್ಡ್‌ವೇರ್‌ ಪಾರ್ಕ್‌ -ಧರ್ಮಸಿಂಗ್‌

By Staff
|
Google Oneindia Kannada News

ನಗರದಲ್ಲಿ ಹಾರ್ಡ್‌ವೇರ್‌ ಪಾರ್ಕ್‌ -ಧರ್ಮಸಿಂಗ್‌
ಬೆಂಗಳೂರು ಐಟಿ ಡಾಟ್‌ ಇನ್‌-2005ಕ್ಕೆ ಚಾಲನೆ, ಮೇಳಕ್ಕೆ ವರುಣನ ದಯೆ!

ಬೆಂಗಳೂರು : ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ 1,400ಎಕರೆ ವಿಸ್ತಾರದಲ್ಲಿ , ಎಲೆಕ್ಟ್ರಾನಿಕ್‌ ಹಾರ್ಡ್‌ವೇರ್‌ ಪಾರ್ಕ್‌ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಧರ್ಮಸಿಂಗ್‌ ತಿಳಿಸಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಐಟಿ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಅವರು ಈ ಬಗ್ಗೆ ಭರವಸೆ ನೀಡಿದ್ದಾರೆ. ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ನಗರದ ಮೂಲಭೂತ ಸೌಕರ್ಯ ಸುಧಾರಣೆಗೆ ಸಮ್ಮಿಶ್ರ ಸರ್ಕಾರ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದೆ ಎಂದರು.

ವಿಪ್ರೊ, ಬಯೋಕಾನ್‌ ಹಾಗೂ ಎಚ್‌ಪಿ ಕಂಪನಿಗಳಿಗೆ ವಿಶೇಷ ಆರ್ಥಿಕ ವಲಯದ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವುದಾಗಿ ತಿಳಿಸಿದ ಧರ್ಮಸಿಂಗ್‌, ಐಟಿ ಉದ್ಯಮಕ್ಕೆ ಪೂರಕವಾಗಿ ಸರ್ಕಾರ ಸ್ಪಂದಿಸಲಿದೆ. ಅಲ್ಲದೇ ಐಟಿ ಹೊರತು ಪಡಿಸಿ, ಇತರ ಉದ್ದಿಮೆಗಳಲ್ಲಿ 70,000 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಹೇಳಿದರು.

ಬುಧವಾರದಿಂದ ಮಳೆಯಿಲ್ಲದ ಕಾರಣ, ಐಟಿ ಮೇಳ ಸುಸೂತ್ರವಾಗಿ ಮುಂದುವರೆದಿದೆ.

(ಇನ್ಫೋ ವಾರ್ತೆ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X