• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅ.28ರಿಂದ ‘ರಂಗಶಂಕರ’ ನಾಟಕೋತ್ಸವ

By Staff
|

ಅ.28ರಿಂದ ‘ರಂಗಶಂಕರ’ ನಾಟಕೋತ್ಸವ

ವೈವಿಧ್ಯಮಯ ಮತ್ತು ಸುಪ್ರಸಿದ್ಧ ಹದಿನೇಳು ನಾಟಕಗಳನ್ನು ನೋಡುವ ಅವಕಾಶ ಮತ್ತು ರಂಗ ಮಂಥನ

ಬೆಂಗಳೂರು : ಅ.28ರಂದು ಎರಡನೇ ವರ್ಷಕ್ಕೆ ಕಾಲಿಡಲಿದೆ ರಂಗಶಂಕರ. ಈ ಹಿನ್ನೆಲೆಯಲ್ಲಿ ಹಾಗೂ ರಾಜ್ಯೋತ್ಸವದ ಅಂಗವಾಗಿ ಅ.28ರಿಂದ ನ.13ರವರೆಗೆ ಹದಿನೇಳು ದಿನಗಳ ನಾಟಕೋತ್ಸವವನ್ನು ಆಯೋಜಿಸಿದೆ ರಂಗಶಂಕರ.

ಸಂಕೇತ್‌ ಟ್ರಸ್ಟ್‌ ಅಧ್ಯಕ್ಷ ಗಿರೀಶ್‌ ಕಾರ್ನಾಡ್‌ ಮತ್ತು ವ್ಯವಸ್ಥಾಪಕ ಟ್ರಸ್ಟಿ ಅರುಂಧತಿನಾಗ್‌ ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ಒದಗಿಸಿದ್ದಾರೆ.

ಹದಿನೇಳು ನಾಟಕಗಳು ಈ ಸಂದರ್ಭದಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಅವುಗಳಲ್ಲಿ 7ಕನ್ನಡದ ಕೃತಿಗಳು ಪ್ರಯೋಗಗೊಳ್ಳುತ್ತಿವೆ. ನಾಟಕೋತ್ಸವದ ಬೆನ್ನಲ್ಲಿಯೇ ನಟ, ನಿರ್ದೇಶಕರೊಂದಿಗೆ ಸಂವಾದವೂ ಉಂಟು. ಈ ಹದಿನೇಳು ದಿನಗಳ ಕಾಲ ರಂಗಶಂಕರದಲ್ಲಿ ವಿಚಾರ ಸಂಕಿರಣ, ಗಣ್ಯರಿಗೆ ಸನ್ಮಾನ ಸೇರಿದಂತೆ ವಿವಿಧ ರಂಗಚಟುವಟಿಕೆಗಳು ಜರುಗಲಿವೆ.

ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ, ಕರ್ನಾಟಕ ನಾಟಕ ಅಕಾಡೆಮಿ ಮತ್ತು ಮಾಧ್ಯಮ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ 20ರಿಂದ 25 ಮಂದಿ ರಂಗಾಸಕ್ತರಿಗೆ, ಮೇಕಪ್‌, ನಟನೆ, ನಿರ್ದೇಶನ, ರಂಗವಿನ್ಯಾಸ ಸೇರಿದಂತೆ ರಂಗಭೂಮಿಯ ವಿವಿಧ ಮಜಲುಗಳ ಪರಿಚಯಿಸುವ ಕಾರ್ಯಕ್ರಮವೂ ನಡೆಯಲಿದೆ.

ಕೆ.ವಿ.ಸುಬ್ಬಣ್ಣ, ಇಬ್ರಾಹಿಂ ಅಲ್ಕಾಜಿ, ವಿಜಯ್‌ ತೆಂಡೂಲ್ಕರ್‌ , ಎಂ.ಎಸ್‌.ಸತ್ಯು ಸೇರಿದಂತೆ, ಭಾರತೀಯ ರಂಗಭೂಮಿಯ ಮೇಲೆ ತಮ್ಮ ದಟ್ಟ ಪರಿಣಾಮ ಬೀರಿದ ವಿವಿಧ ಸಾಧಕರ ಬದುಕು-ಬರಹದ ಬಗ್ಗೆ ವಿಚಾರ ಮಂಥನವನ್ನು ರಂಗಶಂಕರ ಆಯೋಜಿಸಿದೆ.

ಶ್ರೀರಂಗ, ಚಂದ್ರಶೇಖರ ಕಂಬಾರ, ಪಿ.ಲಂಕೇಶ್‌, ಗಿರೀಶ್‌ ಕಾರ್ನಾಡ್‌, ಪ್ರಸನ್ನ, ಕೆ.ವಿ.ಅಕ್ಷರ ಸೇರಿದಂತೆ ವಿವಿಧ ನಾಟಕಕಾರರ ನಾಟಕಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ.

ನಾಟಕೋತ್ಸವದ ಅಂಗವಾಗಿ ಮಧ್ಯಾಹ್ನ 3ಗಂಟೆಗೆ ಮ್ಯಾಟನಿ ಪ್ರದರ್ಶನವನ್ನು ರಂಗಶಂಕರ ಹಮ್ಮಿಕೊಂಡಿದೆ. ಟಿಕೆಟ್‌ ದರ ರೂ.49. ರಂಗಶಂಕರದಲ್ಲಿ ಟಿಕೆಟ್‌ಗಳು ಅ.25ರಿಂದ ಲಭ್ಯ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : www.rangashankara.org

ದೂರವಾಣಿ ಸಂಖ್ಯೆ : 26581587/8.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more