ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಕಿಅಂಶಗಳ ಸಹಿತ ಗೌಡರಿಗೆ ಇನ್ಫೋಸಿಸ್‌ ತಿರುಗೇಟು

By Staff
|
Google Oneindia Kannada News

ಅಂಕಿಅಂಶಗಳ ಸಹಿತ ಗೌಡರಿಗೆ ಇನ್ಫೋಸಿಸ್‌ ತಿರುಗೇಟು
ನಾರಾಯಣ ಮೂರ್ತಿ ರಾಜೀನಾಮೆ ವಿಮಾನ ನಿಲ್ದಾಣದ ಕಾಮಗಾರಿ ಮೇಲೆ ಪರಿಣಾಮ ಬೀರದು - ಧರ್ಮಸಿಂಗ್‌

ಬೆಂಗಳೂರು : ಮಾಜಿ ಪ್ರಧಾನಿ ಮತ್ತು ಜಾತ್ಯತೀತ ಜನತಾದಳದ ಮುಖಂಡ ಎಚ್‌.ಡಿ.ದೇವೇಗೌಡರ ಟೀಕೆಗಳಿಗೆ ಉತ್ತರ ನೀಡಿರುವ ಇನ್ಫೋಸಿಸ್‌, ರಾಜ್ಯಕ್ಕೆ ತನ್ನ ಕೊಡುಗೆಯನ್ನು ಅಂಕಿಅಂಶದ ಸಹಿತ ವಿವರಿಸಿ ತಿರುಗೇಟು ನೀಡಿದೆ.

ಜೆಡಿಎಸ್‌ ಪಕ್ಷದ ದೇವೇಗೌಡ , ಎಂ.ಪಿ.ಪ್ರಕಾಶ್‌ ಸೇರಿದಂತೆ ಇನ್ನಿತರ ಮುಖಂಡರು ರಾಜ್ಯಕ್ಕೆ ಇನ್ಫೋಸಿಸ್‌ ಸೇರಿದಂತೆ ಐಟಿಕ್ಷೇತ್ರದ ಕೊಡುಗೆ ನಗಣ್ಯ ಎಂದು ದೂರಿರುವ ಬೆನ್ನಲ್ಲಿ, ಇನ್ಫೋಸಿಸ್‌ ವಾಕ್‌ಸಮರಕ್ಕೆ ನಿಂತಿದೆ.

ರಾಜ್ಯಕ್ಕೆ ತನ್ನ ಕೊಡುಗೆಯನ್ನು ಇನ್ಫೋಸಿಸ್‌ ಹೀಗೆ ಪಟ್ಟಿ ಮಾಡಿದೆ ;

  • ಸಂಸ್ಥೆಯಲ್ಲಿ ಒಟ್ಟು 46,000 ಉದ್ಯೋಗಿಗಳಿದ್ದಾರೆ. ಅದರಲ್ಲಿ 22,000 ನೇರ ಉದ್ಯೋಗಗಳನ್ನು ಕರ್ನಾಟಕದಲ್ಲಿ ಸೃಷ್ಟಿ ಮಾಡಲಾಗಿದೆ. ಅಲ್ಲದೇ ಸಂಸ್ಥೆ ಆಧರಿಸಿದ ಉದ್ದಿಮೆಗಳಲ್ಲಿ ಪರೋಕ್ಷ ಉದ್ಯೋಗ ಸೃಷ್ಟಿಯಾಗಿದೆ.
  • ರಾಜ್ಯದ ಸಾಫ್ಟ್‌ವೇರ್‌ ರಫ್ತಿನಲ್ಲಿ ನಮ್ಮ ಪಾಲು ಶೇ.14.
  • ಬೆಂಗಳೂರಿನ ಇನ್ಫೋಸಿಸ್‌ ಕ್ಯಾಂಪಸ್‌ ಭಾರತದ ಅತಿದೊಡ್ಡ ಸಾಫ್ತ್‌ವೇರ್‌ ರಫ್ತು ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
  • ಬೆಂಗಳೂರು, ಮೈಸೂರು ಮತ್ತು ಮಂಗಳೂರು ಸೇರಿದಂತೆ ರಾಜ್ಯದಲ್ಲಿ ನಾವು 1,744 ಕೋಟಿ ರೂ. ಹೂಡಿಕೆ ಮಾಡಿದ್ದೇವೆ.
  • ನಾವು ಸರ್ಕಾರದಿಂದ ರಿಯಾಯಿತಿ ದರದಲ್ಲಿ ಭೂಮಿ ಪಡೆದಿಲ್ಲ. ಮಾರುಕಟ್ಟೆ ದರದಲ್ಲಿ ಭೂಮಿಯನ್ನು ಖರೀದಿಸಿದ್ದೇವೆ.
  • ಉದ್ಯಮದ ವಿಸ್ತರಣೆಗೆ 850 ಎಕರೆ ಭೂಮಿ ಕೋರಿ 2000ದಲ್ಲಿ ಇನ್ಫೋಸಿಸ್‌ ಮನವಿ ಸಲ್ಲಿಸಿತ್ತು. ಆದರೆ ಸರ್ಕಾರ ಈ ಬಗ್ಗೆ ಮೌನವಹಿಸಿದೆ. ಆ ಭೂಮಿಯಲ್ಲಿ ಸಾಫ್ಟ್‌ವೇರ್‌ ಅಭಿವೃದ್ಧಿ ಕೇಂದ್ರ ಸ್ಥಾಪಿಸಿ, 25ಸಾವಿರ ಜನರಿಗೆ ಉದ್ಯೋಗ ನೀಡುವ ಗುರಿ ನಮ್ಮದು.
ಧರ್ಮಸಿಂಗ್‌ ಹೇಳಿಕೆ : ಬೆಂಗಳೂರು ಅಂತಾರಾಷ್ಟ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಗೆ ಇನ್ಪೋಸಿಸ್‌ನ ನಾರಾಯಣ ಮೂರ್ತಿ ರಾಜೀನಾಮೆ ನೀಡಬಾರದಿತ್ತು ಎಂದಿರುವ ಮುಖ್ಯಮಂತ್ರಿ ಧರ್ಮಸಿಂಗ್‌, ಅವರ ರಾಜೀನಾಮೆ ವಿಮಾನ ನಿಲ್ದಾಣದ ಕಾಮಗಾರಿ ಮೇಲೆ ಪರಿಣಾಮ ಬೀರದು ಎಂದಿದ್ದಾರೆ. (ಇನ್ಫೋ ವಾರ್ತೆ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X