• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಾರು ಭ್ರಷ್ಟರು? : ಧರಂ-ದೇವೂಗೆ ಕೃಷ್ಣ ತಿರುಗೇಟು

By Staff
|

ಯಾರು ಭ್ರಷ್ಟರು? : ಧರಂ-ದೇವೂಗೆ ಕೃಷ್ಣ ತಿರುಗೇಟು

ದೇವೇಗೌಡ ಮುಖ್ಯಮಂತ್ರಿಯಾಗಿದ್ದ ಕಾಲ ಭ್ರಷ್ಟವಾಗಿತ್ತು -ಎಸ್‌.ಎಂ.ಕೃಷ್ಣ

ಬೆಂಗಳೂರು : ವಿಶ್ವ ಬ್ಯಾಂಕ್‌ ವರದಿ ಹಿನ್ನೆಲೆಯಲ್ಲಿ ತಮ್ಮ ಮೇಲೆ ಹರಿಹಾಯ್ದಿರುವ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮುಖ್ಯಮಂತ್ರಿ ಧರ್ಮಸಿಂಗ್‌ ಅವರಿಗೆ ಮಹಾರಾಷ್ಟ್ರ ರಾಜ್ಯಪಾಲ ಎಸ್‌.ಎಂ.ಕೃಷ್ಣ ತಿರುಗೇಟು ನೀಡಿದ್ದಾರೆ.

ತಿರುಗೇಟಿನ ತುಣುಕುಗಳು :

  • ನಾನು ಮುಖ್ಯಮಂತ್ರಿಯಾಗಿದ್ದಾಗ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ವಿಶ್ವಬ್ಯಾಂಕ್‌ ವರದಿ ಆಧಾರವಾಗಿಟ್ಟುಕೊಂಡು, ಕೆಲವರು ಹೇಳುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಮಿತಿ ಮೀರಿದ ಭ್ರಷ್ಟಾಚಾರ ನಡೆದದ್ದು 1994-99 ಅವಧಿಯಲ್ಲಿ. ಆಗ ಜನತಾದಳ ಸರ್ಕಾರ ಇತ್ತು. ಮುಖ್ಯಮಂತ್ರಿ ಯಾರಿದ್ದರು ಎಂಬುದು ಪ್ರತಿಯಾಬ್ಬರಿಗೂ ಗೊತ್ತು ... (ಪರೋಕ್ಷವಾಗಿ ದೇವೇಗೌಡರಿಗೆ ಟೀಕೆ)
  • ನಾನು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಭ್ರಷ್ಟಾಚಾರ ಶೇಕಡಾ 9ಕ್ಕೆ ಇಳಿದಿತ್ತು. ಅಲ್ಲದೆ ಪಾರದರ್ಶಕ ಕಾಯಿದೆ ಜಾರಿಗೆ ತರುವ ಮೂಲಕ ಭ್ರಷ್ಟಾಚಾರ ನಿಯಂತ್ರಿಸಲು ಯತ್ನಿಸಿದ್ದೆ. ಜನತಾದಳ ಸರ್ಕಾರದ ಅವಧಿಯಲ್ಲಿ ರಾಜ್ಯದ ಶೇಕಡಾ 32ರಷ್ಟು ಜನ ಲಂಚ ಕೊಟ್ಟಿದ್ದಾರೆ ಎಂದು ವಿಶ್ವಬ್ಯಾಂಕ್‌ ಸಮೀಕ್ಷೆ ಹೇಳಿದೆ. ಆಗ ಆಡಳಿತ ಚುಕ್ಕಾಣಿ ಹಿಡಿದಿದ್ದವರು ಯಾರು?
  • Devegowda

  • ಕೃಷ್ಟಾ ಮೇಲ್ದಂಡೆ ಯೋಜನೆಯಲ್ಲಿ ನಡೆದಿರುವ 400ಕೋಟಿ ರೂಪಾಯಿ ಹಗರಣದ ತನಿಖೆ ನಡೆಸುವ ಪ್ರಸ್ತಾವನೆ ನನ್ನ ನೇತೃತ್ವದ ಸರ್ಕಾರದ ಮುಂದಿತ್ತು. ಆದರೆ, ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಆ ವಿಷಯವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆಗ ಮಾಡಿದ ತಪ್ಪಿಗೆ ಈಗ ದಂಡ ತೆರುವಂತಾಗಿದೆ.
  • ಅಗತ್ಯ ಬಿದ್ದರೆ ಕೃಷ್ಣ ಆಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಕುರಿತು ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಧರ್ಮಸಿಂಗ್‌ ಹೇಳಿದ್ದಾರೆ. ಆದರೆ ಆಗ ಲೋಕೋಪಯೋಗಿ ಸಚಿವರಾಗಿದ್ದದ್ದು ಧರ್ಮಸಿಂಗ್‌. ಅತ್ಯಧಿಕ ವಿಶ್ವಬ್ಯಾಂಕ್‌ ನಿಧಿ ಸಿಕ್ಕಿದ್ದು ಅದೇ ಇಲಾಖೆಗೆ. ಅಲ್ಲಿಂದಲೇ ತನಿಖೆ ಆರಂಭವಾಗಲಿ ...
  • ಸಮೀಕ್ಷೆ-ವರದಿಗಳನ್ನು ಇಟ್ಟುಕೊಂಡು ತನಿಖೆ ಮಾಡಿಸುವುದು ನಾಚಿಕೆಗೇಡು.
  • ಮಾತು ಬದಲಿಸಿದ ಧರಂ : ಮಹಾರಾಷ್ಟ್ರ ರಾಜ್ಯಪಾಲ ಎಸ್‌.ಎಂ.ಕೃಷ್ಣ ಅವರ ಪ್ರತಿಕ್ರಿಯೆ ಹೊರಬಿದ್ದ ಕೆಲವೇ ಕ್ಷಣಗಳಲ್ಲಿ ಮಾತನಾಡಿದ ಮುಖ್ಯಮಂತ್ರಿ ಧರ್ಮಸಿಂಗ್‌, ವಿಶ್ವಬ್ಯಾಂಕ್‌ ವರದಿ ಕುರಿತು ಯಾವುದೇ ತನಿಖೆ ನಡೆಸುವುದಿಲ್ಲ ಎಂದು ಹೇಳಿದ್ದಾರೆ.

    ಏಟಿಗೆ ಎದುರೇಟು : ಸಕ್ರಿಯ ರಾಜಕಾರಣಕ್ಕೆ ಮರಳುವುದಾಗಿ ಎಸ್‌.ಎಂ.ಕೃಷ್ಣ ಹೇಳಿಕೆ ನೀಡಿರುವ ಬೆನ್ನಲ್ಲಿಯೇ, ಭ್ರಷ್ಟತೆಯ ಭೂತ(ರಾಷ್ಟ್ರದಲ್ಲಿಯೇ ಅತಿ ಹೆಚ್ಚಿನ ಭ್ರಷ್ಟತೆ ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದಿದೆ -ವಿಶ್ವಬ್ಯಾಂಕ್‌ ವರದಿ) ಅವರ ಬೆನ್ನಿಗೆ ಬಿದ್ದಿದೆ. ಏಟಿಗೆ ಎದುರೇಟು ಹಾಕುವ ಆಟ ಮುಂದುವರೆದಿದೆ.

    (ಇನ್ಫೋ ವಾರ್ತೆ)

    ಮುಖಪುಟ / ಕೃಷ್ಣಗಾರುಡಿ

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more