ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಪಾಲ ಹುದ್ದೆಯಿಂದ ಕೃಷ್ಣ ವಜಾಕ್ಕೆ ಬಿಜೆಪಿ ಪಟ್ಟು

By Staff
|
Google Oneindia Kannada News

ರಾಜ್ಯಪಾಲ ಹುದ್ದೆಯಿಂದ ಕೃಷ್ಣ ವಜಾಕ್ಕೆ ಬಿಜೆಪಿ ಪಟ್ಟು
ಇವು ಸಮ್ಮಿಶ್ರ ಸರ್ಕಾರದ ಕಡೆಯ ದಿನಗಳು -ಬಿಜೆಪಿ ನಾಯಕರ ಅಭಿಮತ

ಹುಬ್ಬಳ್ಳಿ : ಸಾಂವಿಧಾನಿಕ ಕ್ರಮ ಉಲ್ಲಂಘಿಸಿ, ಸಕ್ರಿಯ ರಾಜಕಾರಣದಲ್ಲಿ ತೊಡಗಿರುವ ರಾಜ್ಯಪಾಲರಾದ ಎಸ್‌.ಎಂ.ಕೃಷ್ಣ ಮತ್ತು ಬೂಟಾಸಿಂಗ್‌ ಅವರನ್ನು ವಾಪಸ್‌ ಕರೆಸಿಕೊಳ್ಳಬೇಕೆಂದು ಬಿಜೆಪಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಿದೆ.

ಸಮ್ಮಿಶ್ರ ಸರ್ಕಾರ ವೈಫಲ್ಯಗಳನ್ನು ಜನರ ಮುಂದಿಡುವ ಸಂಘರ್ಷ ಯಾತ್ರೆಗೆಂದು ನಗರಕ್ಕೆ ಆಗಮಿಸಿದ್ದ , ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್‌ ಮತ್ತು ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಹಾರಾಷ್ಟ್ರ ರಾಜ್ಯಪಾಲ ಎಸ್‌.ಎಂ.ಕೃಷ್ಣ ಮತ್ತು ಬಿಹಾರ ರಾಜ್ಯಪಾಲ ಬೂಟಾಸಿಂಗ್‌ ಅವರ ವರ್ತನೆಗಳನ್ನು ತೀಕ್ಷ್ಣವಾಗಿ ಖಂಡಿಸಿರುವ ಬಿಜೆಪಿ ನಾಯಕರು, ರಾಜ್ಯಪಾಲ ಹುದ್ದೆಯಿಂದ ಈ ಇಬ್ಬರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದರು.

ರಾಜ್ಯದಲ್ಲಿ ಆಡಳಿತ ಯಂತ್ರ ನಿದ್ದೆ ಮಾಡುತ್ತಿದೆ. ದೇವೇಗೌಡರ ಕಿರುಕುಳದಿಂದ ಧರ್ಮಸಿಂಗ್‌ ಪೇಚಿಗೆ ಸಿಲುಕಿದ್ದಾರೆ. ಇವು ಸಮ್ಮಿಶ್ರ ಸರ್ಕಾರದ ಕಡೆಯ ದಿನಗಳು ಎಂದು ಅನಂತಕುಮಾರ್‌ ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಜಗದೀಶ ಶೆಟ್ಟರ್‌, ಸುರೇಶ್‌ಕುಮಾರ, ಮುಖ್ಯಮಂತ್ರಿಚಂದ್ರು ಮತ್ತಿತರರು ಹಾಜರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X