ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಅಹಿಂದ’ಗೆ ಶ್ರೀನಿವಾಸ ಪ್ರಸಾದ್‌, ದಳಕ್ಕೆ ಚಿಮ್ಮನಕಟ್ಟಿ?

By Staff
|
Google Oneindia Kannada News

‘ಅಹಿಂದ’ಗೆ ಶ್ರೀನಿವಾಸ ಪ್ರಸಾದ್‌, ದಳಕ್ಕೆ ಚಿಮ್ಮನಕಟ್ಟಿ?
ಕುರುಬ ಸಮಾಜದ ಮತ ಸೆಳೆಯುವ ತಂತ್ರ, ಜೆಡಿಎಸ್‌ನ ಹೊಸ ವರಸೆ

ಬೆಂಗಳೂರು : ಜಾತ್ಯತೀತ ಜನತಾದಳದ ಬಲ ಕುಗ್ಗಿಸುವ ಮತ್ತು ಹಿಗ್ಗಿಸುವ ಎರಡು ರಾಜಕೀಯ ಬೆಳವಣಿಗೆಗಳು ರಾಜಕೀಯ ವಿಶ್ಲೇಷಕರ ಗಮನ ಸೆಳೆದಿವೆ.

ಒಂದೆಡೆ ದೇವೇಗೌಡರ ಕಾರ್ಯವೈಖರಿಯಿಂದ ಬೇಸತ್ತಿರುವ ಜೆಡಿಎಸ್‌ ನಾಯಕ ಶ್ರೀನಿವಾಸ್‌ ಪ್ರಸಾದ್‌, ‘ಅಹಿಂದ’ದಲ್ಲಿ ಪಾಲ್ಗೊಳ್ಳುವ ನಿರ್ಧಾರ ಪ್ರಕಟಿಸಿದ್ದಾರೆ. ಮತ್ತೊಂದೆಡೆ ದೇವೇಗೌಡರ ನಾಯಕತ್ವ ಮೆಚ್ಚಿ

ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ನಾಯಕ ಬಿ.ಬಿ.ಚಿಮ್ಮನಕಟ್ಟಿ ಜೆಡಿಎಸ್‌ ಪ್ರವೇಶಿಲಿದ್ದಾರೆ ಎಂಬ ವದಂತಿ ಹಬ್ಬಿದೆ.

ಜೆಡಿಎಸ್‌ ಪ್ರವೇಶಿಸುವ ಹಿನ್ನೆಲೆಯಲ್ಲಿ ಚಿಮ್ಮನಕಟ್ಟಿ ಅವರು ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸಿದ್ದು, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರನ್ನೂ ಭೇಟಿ ಮಾಡಿದ್ದಾರೆ ಎನ್ನಲಾಗಿದೆ.

ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಬೇಸತ್ತಿರುವ ಅವರು ಶೀಘ್ರವೇ ಜಾತ್ಯತೀತ ಜನತಾದಳ ಸೇರಲಿದ್ದಾರೆಂಬುದು ಚಲಾವಣೆಯಲ್ಲಿರುವ ಮಾತು. ಕುರುಬ ಸಮಾಜದ ನಾಯಕರಾಗಿರುವ ಚಿಮ್ಮನಕಟ್ಟಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಸಿದ್ಧರಾಮಯ್ಯ ಅವರಿಗೆ ಪರ್ಯಾಯವನ್ನು ಸೃಷ್ಟಿಸುವುದು ರಾಜಕೀಯ ಲೆಕ್ಕಾಚಾರ ಎಂಬುದೂ ಕೇಳಿಬರುತ್ತಿದೆ.

ಕೃಷ್ಣ ಸರ್ಕಾರದ ಸಚಿವ ಸಂಪುಟದಲ್ಲಿ ಸಚಿವ ಪದವಿ ಅಲಂಕರಿಸಿದ್ದ ಅವರು, ಸಂಪುಟ ಪುನಾರಚನೆಯಾದಾಗ ಪದವಿ ಕಳೆದುಕೊಂಡಿದ್ದರು. ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಾಗ ಎಚ್‌.ಕೆ.ಪಾಟೀಲ್‌ ಅವರನ್ನು ಬೆಂಬಲಿಸಿದ್ದ ಕಾರಣ ಪದವಿ ಕಳೆದುಕೊಳ್ಳಬೇಕಾಯಿತು ಎಂಬ ಮಾತು ಕೇಳಿಬಂದಿತ್ತು. ಆಗ, ಎ.ಎಂ.ಹಿಂಡಸಗೇರಿ, ದಿವಂಗತ ಎಸ್‌.ಆರ್‌.ಕಾಶಪ್ಪನವರ ಮೊದಲಾದವರು ಸಚಿವ ಸ್ಥಾನ ಕಳೆದುಕೊಂಡಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X