ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು-ಕಾಶ್ಮೀರ್‌ ಭೂಕಂಪ ಸಂತ್ರಸ್ತರಿಗೆ 10ಕೋಟಿ

By Staff
|
Google Oneindia Kannada News

ಜಮ್ಮು-ಕಾಶ್ಮೀರ್‌ ಭೂಕಂಪ ಸಂತ್ರಸ್ತರಿಗೆ 10ಕೋಟಿ
ಭೂಕಂಪ ಪೀಡಿತ ಪ್ರದೇಶಕ್ಕೆ ಪ್ರಧಾನಿಯಿಂದ 642ಕೋಟಿ ರೂ.ಗಳ ನೆರವು

ಬೆಂಗಳೂರು : ಜಮ್ಮು-ಕಾಶ್ಮೀರ್‌ನ ಭೂಕಂಪ ಪೀಡಿತ ಸಂತ್ರಸ್ತರಿಗೆ ನೆರವು ನೀಡಲು, ಹತ್ತು ಕೋಟಿ ಮೌಲ್ಯದ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿರುವುದಾಗಿ ರಾಜ್ಯಸರ್ಕಾರ ಶುಕ್ರವಾರ ಪ್ರಕಟಿಸಿದೆ.

ಸುದ್ದಿಗಾರರಿಗೆ ಈ ಬಗ್ಗೆ ಮಾಹಿತಿ ನೀಡಿರುವ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ , ಜಮ್ಮು-ಕಾಶ್ಮೀರ್‌ ರಾಜ್ಯದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ರಾಮನ್‌ ಮಠ್‌ ನೇತೃತ್ವದ ನಿಯೋಗದ ಕೋರಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದೆ ಎಂದರು.

ಮಾರಕ ಭೂಕಂಪದ ಫಲವಾಗಿ ಜಮ್ಮು-ಕಾಶ್ಮೀರದಲ್ಲಿ 1.6ಕೋಟಿ ಮಂದಿ ವಸತಿಹೀನರಾಗಿದ್ದಾರೆ. ಈ ರಾಜ್ಯಕ್ಕೆ ತುರ್ತಾಗಿ ಟಾರ್ಪಲ್‌ ಮತ್ತು ಟೆಂಟ್‌ಗಳನ್ನು ಕಳುಹಿಸುವುದಾಗಿ ತಿಳಿಸಿರುವ ಧರ್ಮಸಿಂಗ್‌, ಉದಾರಿಗಳು ಹೆಚ್ಚಿನ ನೆರವು ನೀಡಬೇಕೆಂದು ಮನವಿ ಮಾಡಿದ್ದಾರೆ.

ನೆರವು : ಜಮ್ಮು-ಕಾಶ್ಮೀರದ ಸಚಿವ ರಾಮನ್‌ ಮಠ್‌ ಸುದ್ದಿಗಾರರೊಂದಿಗೆ ಮಾತನಾಡುತ್ತ, ಕಟ್ಟಡ ಸಾಮಗ್ರಿ, ಟೆಂಡ್‌ಗಳ ನಿರ್ಮಾಣಕ್ಕೆ ಅಗತ್ಯವಾದ ಸಲಕರಣೆಗಳಿಗೆ ಕರ್ನಾಟಕ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದೇವೆ. ಪ್ರಧಾನಿ ಮನಮೋಹನ್‌ ಸಿಂಗ್‌ 642ಕೋಟಿ ರೂ.ಗಳ ನೆರವು ಘೋಷಿಸಿದ್ದಾರೆ ಎಂದು ಹೇಳಿದರು.

(ಪಿಟಿಐ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X