ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರ್ವಜನಿಕರ ಮಾಹಿತಿಗೆ ‘ಮಾಹಿತಿ ಹಕ್ಕು ಕಾಯ್ದೆ’ ಜಾರಿ

By Staff
|
Google Oneindia Kannada News

ಸಾರ್ವಜನಿಕರ ಮಾಹಿತಿಗೆ ‘ಮಾಹಿತಿ ಹಕ್ಕು ಕಾಯ್ದೆ’ ಜಾರಿ
ಈ ಕಾನೂನಾದರೂ ಭ್ರಷ್ಟಾಚಾರಕ್ಕೆ ಮಂಗಳ ಹಾಡುವುದೇ? ಆದರೆ ಇದು ಜಮ್ಮು-ಕಾಶ್ಮೀರಕ್ಕೆ ಅನ್ವಯವಾಗದಂತೆ...!?

ನವದೆಹಲಿ : ಸರ್ಕಾರದಿಂದ ಸಾರ್ವಜನಿಕರು ಮಾಹಿತಿ ಪಡೆಯುವ ‘ಮಾಹಿತಿ ಹಕ್ಕು ಕಾಯ್ದೆ’ಯು (ರೈಟ್‌ ಟು ಇನ್‌ಫರ್ಮೇಶನ್‌ ಆಕ್ಟ್‌) ಬುಧವಾರದಿಂದ ಜಾರಿಗೆ ಬಂದಿದೆ.

ಕಳೆದ ಬಜೆಟ್‌ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಪಾಸಾಗಿದ್ದ ಈ ಕಾಯ್ದೆಗೆ ಜೂನ್‌ 15ರಂದು ರಾಷ್ಟ್ರಪತಿಗಳು ಅಂಕಿತ ಹಾಕಿದ್ದರು. ಈ ರೀತಿ ಶಾಸನ ಜಾರಿಗೆ ಬಂದಿರುವ 55 ದೇಶಗಳಲ್ಲಿ ಭಾರತವೂ ಒಂದಾಗಿದ್ದು, ಸರ್ಕಾರಿ ಅಧಿಕಾರಿಗಳ ಕಾರ್ಯವೈಖರಿಯ ಬದ್ಧತೆ ಮತ್ತು ಕೆಲಸದಲ್ಲಿ ಪಾರದರ್ಶಕತೆ ತರಲು ಈ ಕಾನೂನು ಸಹಕಾರಿಯಾಗಲಿದೆ.

ಈ ಹೊಸ ಕಾಯ್ದೆ ಜಮ್ಮು-ಕಾಶ್ಮೀರಕ್ಕೆ ಅನ್ವಯವಾಗುವುದಿಲ್ಲ. ಕೇಂದ್ರ ಮತ್ತು ರಾಜ್ಯ ಆಡಳಿತ, ಪಂಚಾಯತಿಗಳು, ಸ್ಥಳೀಯ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಭ್ರಷ್ಟಾಚಾರವನ್ನು ಹತ್ತಿಕ್ಕಲು ಈ ಶಾಸನ ತರಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X