ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಾಟ್‌ ಎಫೆಕ್ಟ್‌ : ಧರ್ಮ ಖಜಾನೆಗೆ 473ಕೋಟಿ ಖೋತಾ

By Staff
|
Google Oneindia Kannada News

ವ್ಯಾಟ್‌ ಎಫೆಕ್ಟ್‌ : ಧರ್ಮ ಖಜಾನೆಗೆ 473ಕೋಟಿ ಖೋತಾ
ಹಾಸನ ಮತ್ತು ಗುಲ್ಬರ್ಗದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಕೇಂದ್ರ ಸಮ್ಮತಿ -ಪಿ.ಜಿ.ಆರ್‌.ಸಿಂಧ್ಯ

ಬೆಂಗಳೂರು : ಕಳೆದ ಐದು ತಿಂಗಳಲ್ಲಿ ಮೌಲ್ಯವರ್ಧಿತ ತೆರಿಗೆ ಪದ್ಧತಿ(ವ್ಯಾಟ್‌) ಪರಿಣಾಮದಿಂದ, ರಾಜ್ಯಕ್ಕೆ ಈವರೆಗೆ 473ಕೋಟಿ ರೂ.ನಷ್ಟವಾಗಿದೆ. ಆದರೆ ಸರ್ಕಾರ ಈ ಪದ್ಧತಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಹಣಕಾಸು ಸಚಿವ ಪಿ.ಜಿ.ಆರ್‌.ಸಿಂಧ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಏಪ್ರಿಲ್‌ನಿಂದ ಈವರೆಗೆ ವ್ಯಾಟ್‌ ತೆರಿಗೆ ಬಾಬ್ತಿನಲ್ಲಿ ಶೇ.4ರಷ್ಟು ಖೋತಾ ಆಗಿದೆ. ಈ ನಷ್ಟವನ್ನು ತುಂಬಿಕೊಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

ಆರಂಭದಲ್ಲಿ ವ್ಯಾಟ್‌ನಿಂದ ನಷ್ಟ ಉಂಟಾದರೂ, ಮುಂದಿನ ದಿನಗಳಲ್ಲಿ ಮಾರಾಟಗಾರರು, ಗ್ರಾಹಕರು ಮತ್ತು ಸರ್ಕಾರಕ್ಕೆ ಲಾಭವಾಗಲಿದೆ ಎಂದು ಸಿಂಧ್ಯ ಅಭಿಪ್ರಾಯಪಟ್ಟರು.

ನೂತನವಾಗಿ ಆರಂಭಗೊಂಡಿರುವ ತುಮಕೂರು ವಿಶ್ವವಿದ್ಯಾಲಯದಲ್ಲಿ ಹದಿನಾರು ವಿಭಾಗಗಳನ್ನು ತೆರೆಯಲು ಹಣಕಾಸು ಇಲಾಖೆ ಸಮ್ಮತಿಸಿದೆ ಎಂದ ಸಚಿವರು ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಮೈಸೂರು ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಯೋಜನೆ ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಹಾಸನ ಮತ್ತು ಗುಲ್ಬರ್ಗಗಳಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಕೇಂದ್ರ ಅನುಮತಿ ನೀಡಿದೆ ಎಂದು ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X