ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ, ಪಾಕ್‌ ಮತ್ತು ಆಫ್ಘಾನಿಸ್ತಾನದಲ್ಲಿ ಭೂಕಂಪ

By Staff
|
Google Oneindia Kannada News

ಭಾರತ, ಪಾಕ್‌ ಮತ್ತು ಆಫ್ಘಾನಿಸ್ತಾನದಲ್ಲಿ ಭೂಕಂಪ
ಭೂಕಂಪದ ತೀವ್ರತೆ 7.4, ಜನರಲ್ಲಿ ಹೆಚ್ಚಿದ ಆತಂಕ

ನವದೆಹಲಿ : ಉತ್ತರ ಭಾರತದ ಕೆಲವು ರಾಜ್ಯಗಳು, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ಸೇರಿದಂತೆ ವಿವಿಧೆಡೆ ಶನಿವಾರ ಬೆಳಗ್ಗೆ ಭೂಕಂಪ ಸಂಭವಿಸಿದೆ.

ಭೂಕಂಪದ ತೀವ್ರತೆ ರಿಕ್ಟರ್‌ ಮಾಪನದಲ್ಲಿ 7.4ರಷ್ಟಿತ್ತು ಎನ್ನಲಾಗಿದೆ. ನವದೆಹಲಿಯಲ್ಲಿ ಬೆಳಿಗ್ಗೆ 9.20ರ ಸುಮಾರಿನಲ್ಲಿ ಕಂಪನ ಕಂಡು ಬಂದಿದೆ. ನಂತರ ಹದಿನೈದು ನಿಮಿಷಗಳ ಅಂತರದಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿದೆ.

ಈ ಭೂಕಂಪನದ ಕೇಂದ್ರ ಬಿಂದು, ಪಾಕ್‌ ಆಕ್ರಮಿತ ಕಾಶ್ಮೀರದ ಮುಜಫರಾಬಾದ್‌ನಲ್ಲಿದೆ. ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ಉತ್ತಾರಾಂಚಲ, ಪಂಜಾಬ್‌ ಮತ್ತು ಹಿಮಾಚಲ ಪ್ರದೇಶದಲ್ಲಿ ಭೂಕಂಪನವಾದ ಬಗ್ಗೆ ವರದಿಗಳು ಬಂದಿವೆ.

ಜಮ್ಮು-ಕಾಶ್ಮೀರದಲ್ಲಿ ಬಂಕರ್‌ ಕುಸಿದು, ಅದರೊಳಗಿದ್ದ ಐದು ಮಂದಿ ಸೈನಿಕರು ಮೃತಪಟ್ಟಿದ್ದಾರೆ. ಇನ್ನುಳಿದ ಹನ್ನೆರಡಕ್ಕೂಅಧಿಕ ಮಂದಿ ಗಾಯಗೊಂಡಿದ್ದಾರೆ.

ಅಸ್ಸಾಂನಲ್ಲೂ ಭೂಕಂಪನವಾದ ಬಗ್ಗೆ ಮೂಲಗಳು ತಿಳಿಸಿವೆ. ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಲ್ಲಿ ತೀವ್ರ ಕಂಪನವಾಗಿದೆ. ಕಂಪನದ ಅನುಭವವಾದ ತಕ್ಷಣ ಜನರು ಆತಂಕದಿಂದ ಮನೆಬಿಟ್ಟು ಹೊರ ಬಂದಿದ್ದಾರೆ.

ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಬೆಳಿಗ್ಗೆ 9ರ ಸುಮಾರಿನಲ್ಲಿ ಕಟ್ಟಡಗಳು ನಡುಗಿ, ಗೋಡೆಗಳು ಕುಸಿದಿವೆ. ಪಾಕಿಸ್ತಾನದ ವಿವಿಧೆಡೆ ಕಂಪನ ಕಂಡು ಬಂದಿದೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಹೆಲಿಕಾಪ್ಟರ್‌ ಬಳಸಿ, ಅಗತ್ಯ ಸೇವೆಗಳನ್ನು ನೀಡಲಾಗುತ್ತಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X