ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾತೃ ವಾತ್ಸಲ್ಯ : 20 ವರ್ಷ ಶವ ಕಾಯ್ದಿಟ್ಟ ಪುತ್ರ

By Staff
|
Google Oneindia Kannada News

ಮಾತೃ ವಾತ್ಸಲ್ಯ : 20 ವರ್ಷ ಶವ ಕಾಯ್ದಿಟ್ಟ ಪುತ್ರ
ಕೊನೆಗೂ ತಾಯಿಯಾಡನೆಯೇ ಸಮಾಧಿಯಾದ...

ಹೈದರಾಬಾದ್‌ : ತಾಯಿಯ ಮೃತದೇಹವನ್ನು 20ವರ್ಷಗಳ ಕಾಲ ಹೂಳದೇ, ಕೊನೆಗೆ ಅದರೊಡನೆಯೇ ಸಮಾಧಿಯಾದ ಪುತ್ರನ ಮಾತೃಪ್ರೇಮ ಕಡಪಾ ಜಿಲ್ಲೆಯ ಗ್ರಾಮವೊಂದರಿಂದ ವರದಿಯಾಗಿದೆ.

ಈ ಘಟನೆ ಕಡಪಾ ಜಿಲ್ಲೆಯ ಸಿದ್ಧವಟಂನಲ್ಲಿ ನಡೆದಿದೆ. 1985ರಲ್ಲಿ ಅಬ್ದುಲ್‌ ಸಯ್ಯದ್‌ ಗಫೂರ್‌ ಅವರ ತಾಯಿ ನಿಧನ ಹೊಂದಿದ್ದರು. ತಾಯಿಯ ಶವವನ್ನು ಹೂಳಲು ಇಚ್ಛಿಸದ ಅವರು, ಮನೆಯಲ್ಲಿಯೇ 20 ವರ್ಷಗಳ ಕಾಲ ಕಾಯ್ದಿಟ್ಟರು. ಶವ ಕೆಡದಂತೆ ಕಾಯಲು, ರಾಸಾಯನಿಕ ಬಳಸಿದರು. ಅಲ್ಲದೇ ಶವಕ್ಕೆ ಮೇಣದ ಲೇಪನಮಾಡಿ, ಗಾಜಿನ ಕಫನ್‌ನಲ್ಲಿ ಸುರಕ್ಷಿತವಾಗಿಟ್ಟಿದ್ದರು.

ಇದಕ್ಕೆ ಕಾರಣ ಅವರ ಬಿಟ್ಟಿರಲಾಗದ ಮಾತೃವಾತ್ಸಲ್ಯಮತ್ತು ತನ್ನ ತಾಯಿಯಾಂದಿಗೇ ಸಮಾಧಿಯಾಗುವ ಬಯಕೆ.

ಕಳೆದ ವಾರವಷ್ಟೇ ನಿಧನವಾದ ಗಫೂರ್‌(70)ಅವರ ಆಸೆಯನ್ನು, ಅವರ ಗ್ರಾಮದ ಜನರು ಈಡೇರಿಸಿದ್ದಾರೆ. ಗಫೂರ್‌ ಮತ್ತವರ ತಾಯಿಯ ಶವವನ್ನು ಒಂದೇ ಸಮಾಧಿಯಲ್ಲಿ ಹೂತು ಅಂತ್ಯ ಸಂಸ್ಕಾರ ಮಾಡಿದ್ದಾರೆ. ಗ್ರಾಮದ ಮಸೀದಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.

ಗಫೂರ್‌ ನಿವೃತ್ತ ಇಂಗ್ಲಿಷ್‌ ಪ್ರಾಧ್ಯಾಪಕರಾಗಿದ್ದು, ಕೇಂಬ್ರಿಡ್ಜ್‌ನಲ್ಲಿ ಕಲಿತಿದ್ದರು. ಅವರ ಜ್ಞಾನದ ಬಗ್ಗೆ ಪರಿಚಯವಿದ್ದವರು, ಗಫೂರ್‌ ಭಾರತದ ಸಾಕ್ರೆಟಿಸ್‌ ಎಂದೇ ಕರೆಯುತ್ತಿದ್ದರು.

ಮದರಾಸು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ ಪಡೆದಿದ್ದ ಅವರು, ತಮಿಳುನಾಡಿನ ತಂಜಾವೂರಿನಲ್ಲಿ ಪ್ರಾಧ್ಯಾಪಕರಾಗಿದ್ದರು. 1964ರಲ್ಲಿ ಮದುವೆಯಾಗಿದ್ದ ಅವರು, ಹೆಂಡತಿ ತನ್ನ ತಾಯಿಯಾಡನೆ ಜಗಳ ಮಾಡಿದ ಕಾರಣ ವಿಚ್ಛೇದನ ನೀಡಿದ್ದರು.

1987ರಲ್ಲಿ ಸೇವೆಯಿಂದ ನಿವೃತ್ತರಾದ ನಂತರ ಯಾವಾಗಲೂ ಮನೆಯಲ್ಲೇ ಇರುತ್ತಿದ್ದರು. ಪಾರ್ವತಿ ಎಂಬ ಮಹಿಳೆಯ ಹೊರತು ಬೇರೆ ಯಾರನ್ನೂ ಮನೆಗೆ ಬರಲು ಬಿಡುತ್ತಿರಲಿಲ್ಲ. ಮರಣಾನಂತರ ನನ್ನೆಲ್ಲ ಆಸ್ತಿಯೂ ಪಾರ್ವತಿಗೇ ಸೇರತಕ್ಕದ್ದು, ಎಂದು ವಿಲ್‌ ಬರೆದಿಟ್ಟಿದ್ದರು.

ಗಫೂರ್‌ ಹಲವು ಪುಸ್ತಕಗಳನ್ನೂ ಬರೆದಿದ್ದರು. ಅವುಗಳ ಪೈಕಿ ಮದರ್ಸ್‌ ಲವ್‌(ತಾಯಿಯ ಪ್ರೀತಿ), ಮ್ಯಾರೇಜ್‌ ಒನ್ಸ್‌ ಓನ್ಲಿ(ಮದುವೆ ಒಂದೇ ಸಲ) ಎಂಬ ಕೃತಿಗಳು ಅವರ ಬದುಕನ್ನೇ ಪ್ರತಿಧ್ವನಿಸಿರುವುದು ಕುತೂಹಲಕರ ವಿಷಯ.

(ಇನ್ಫೋ ವಾರ್ತೆ)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X