ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಟೋರ್‌ ಕೀಪರ್‌ ಮನೆಯಲ್ಲಿ ಕೋಟಿಕೋಟಿ ಹಣ!

By Staff
|
Google Oneindia Kannada News

ಸ್ಟೋರ್‌ ಕೀಪರ್‌ ಮನೆಯಲ್ಲಿ ಕೋಟಿಕೋಟಿ ಹಣ!
ಲೋಕಾಯುಕ್ತ ಬಲೆಗೆ ಗುಲ್ಬರ್ಗ ಜಿಲ್ಲೆಯ ಸ್ಟೋರ್‌ ಕೀಪರ್‌

ಗುಲ್ಬರ್ಗ : ಲೋಕಾಯುಕ್ತ ಪೊಲೀಸರು ಅಧಿಕಾರಿಗಳ ಮನೆಗಳ ಮೇಲೆ ಮುಗಿಬಿದ್ದು , ಕೋಟಿಕೋಟಿ ಹಣವನ್ನು ವಶಪಡಿಸಿಕೊಳ್ಳುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವೆನ್ನಿಸಿಬಿಟ್ಟಿದೆ! ಭ್ರಷ್ಟತೆಯಲ್ಲಿ ಅಧಿಕಾರಿಗಳನ್ನು ಗುಲ್ಬರ್ಗ ಜಿಲ್ಲೆಯ ಈ ಸ್ಟೋರ್‌ ಕೀಪರ್‌ ಹಿಮ್ಮೆಟ್ಟಿಸಿದ್ದಾನೆ!

ಈತನ ಹೆಸರು ಅಣ್ಣಾರಾವ. ಈತ ಚಿತ್ತಾಪುರ ತಾಲೂಕಿನ ಹೆಬ್ಬಾಳದ ಬೆಣ್ಣೆತೊರಾ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಕಚೇರಿಯ ಸ್ಟೋರ್‌ ಕೀಪರ್‌. ಈತನ ಮೇಲೆ ಕಣ್ಣಿಟ್ಟಿದ್ದ ಲೋಕಾಯುಕ್ತರು ಏಕಕಾಲದಲ್ಲಿ ಅಣ್ಣಾರಾವ್‌ನ ಮನೆ, ತೋಟದ ಮನೆ, ವಸತಿ ಶಾಲೆಗಳ ಮೇಲೆ ದಾಳಿ ನಡೆಸಿದರು.

ಈ ದಾಳಿಯ ಸಂದರ್ಭದಲ್ಲಿ 700 ಗ್ರಾಂ ಚಿನ್ನ ಸೇರಿದಂತೆ, 1.2ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿಪಾಸ್ತಿಯನ್ನು ಲೋಕಾಯುಕ್ತ ಪೊಲೀಸರು ಪತ್ತೆಹಚ್ಚಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X