ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರಾಂತ್ಯದೊಳಗೆ ಚಲನಚಿತ್ರ ಅಕಾಡೆಮಿ -ಧರಂ

By Staff
|
Google Oneindia Kannada News

ವಾರಾಂತ್ಯದೊಳಗೆ ಚಲನಚಿತ್ರ ಅಕಾಡೆಮಿ -ಧರಂ
ಬರಗೂರರ ಸಮುದಾಯದತ್ತ ಚಿತ್ರಯಾತ್ರೆಗೆ ತೆರೆ, ನಗರದ ವಿವಿಧೆಡೆ ‘ಶಾಂತಿ’ ಪ್ರದರ್ಶನ

ಬೆಂಗಳೂರು : ಬಹು ನಿರೀಕ್ಷಿತ ಚಲನಚಿತ್ರ ಅಕಾಡೆಮಿಗೆ ಸುಸಮಯ ಬಂದಿದ್ದು, ಒಂದು ವಾರದೊಳಗೆ ಅಕಾಡೆಮಿ ಸ್ಥಾಪನೆಯಾಗಲಿರುವುದಾಗಿ ಮುಖ್ಯಮಂತ್ರಿ ಎನ್‌. ಧರ್ಮಸಿಂಗ್‌ ಪ್ರಕಟಿಸಿದ್ದಾರೆ.

ಬರಗೂರು ರಾಮಚಂದ್ರಪ್ಪ ಅವರ ಗಿನ್ನಿಸ್‌ ದಾಖಲೆಯ‘ಶಾಂತಿ’ ಚಿತ್ರ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು, ಚಲನಚಿತ್ರ ಅಕಾಡೆಮಿ ಸ್ಥಾಪನೆಯ ವಿಷಯವನ್ನು ಬಹಿರಂಗ ಪಡಿಸಿದರು.

ಚಲನಚಿತ್ರ ಅಕಾಡೆಮಿ ಸ್ಥಾಪನೆ ಪ್ರಸ್ತಾವಕ್ಕೆ ಹಣಕಾಸು ಇಲಾಖೆಯು ಮನ್ನಣೆ ನೀಡಿದೆ. ಇನ್ನು ಕೆಲವೇ ದಿನಗಳಲ್ಲಿ ಅಕಾಡೆಮಿ ಅಧ್ಯಕ್ಷರು ಮತ್ತು ಸದಸ್ಯರನ್ನೂ ನೇಮಕ ಮಾಡಿಕೊಳ್ಳುವುದಾಗಿ ಧರ್ಮಸಿಂಗ್‌ ಹೇಳಿದರು.

ಸಮುದಾಯದತ್ತ ಚಿತ್ರ ಎಂಬ ಯೋಜನೆಯನ್ವಯ ಶಾಂತಿ ಚಿತ್ರವನ್ನು ನಗರದ ವಿವಿಧೆಡೆ ಪ್ರದರ್ಶಿಸಲಾಗಿದೆ. ಈ ಕಾರ್ಯಕ್ರಮದ ಸಮಾರೋಪ ಸಭೆಯಲ್ಲಿ ಬರಗೂರು ರಾಮಚಂದ್ರಪ್ಪ ಮತ್ತು ಅವರ ಪತ್ನಿ ರಾಜಲಕ್ಷ್ಮಿ ಬರಗೂರು ಅವರನ್ನು ಸನ್ಮಾನಿಸಲಾಯಿತು.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X