ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವ ಪತ್ರಕರ್ತರ ಸಂಶೋಧನೆಗೆ ಫೆಲೋಷಿಪ್‌

By Staff
|
Google Oneindia Kannada News

ಯುವ ಪತ್ರಕರ್ತರ ಸಂಶೋಧನೆಗೆ ಫೆಲೋಷಿಪ್‌
ಬೆಂಗಳೂರಿನಲ್ಲಿ ನ.16ರಂದು ರಾಷ್ಟ್ರೀಯ ಪತ್ರಿಕಾ ದಿನ ಆಚರಣೆ

ಬೆಂಗಳೂರು : ಯುವ ಪತ್ರಕರ್ತರ ಅಧ್ಯಯನ/ ಸಂಶೋಧನೆಗೆ ಪೂರಕವಾಗುವ ನಿಟ್ಟಿನಲ್ಲಿ ಮಾಧ್ಯಮ ಅಕಾಡೆಮಿ, ಫೆಲೋಷಿಪ್‌ ನೀಡಲಿದೆ.

ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿರುವ ಮಾಧ್ಯಮ ಅಕಾಡೆಮಿ ಅಧ್ಯಕ್ಷ ವಿ.ಎನ್‌.ಸುಬ್ಬರಾವ್‌, ಪ್ರತಿ ವರ್ಷ ಇಬ್ಬರು ಯುವ ಪತ್ರಕರ್ತರಿಗೆ ಈ ಫೆಲೋಷಿಪ್‌ ದೊರೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳ ಹೆಸರನ್ನು ರಾಷ್ಟ್ರೀಯ ಪತ್ರಿಕಾ ದಿನವಾದ ನ.16ರಂದು ಪ್ರಕಟಿಸಲಾಗುವುದು ಎಂದರು.

ಆಯ್ಕೆಗೊಂಡ ಅಭ್ಯರ್ಥಿಗೆ ಪ್ರತಿ ತಿಂಗಳು ಐದು ಸಾವಿರದಂತೆ ಆರು ತಿಂಗಳ ಕಾಲ ಫೆಲೋಷಿಪ್‌ ನೀಡಲಾಗುವುದು. ಅಲ್ಲದೇ ಹದಿನೈದು ಸಾವಿರ ರೂ. ಪ್ರಯಾಣ ಭತ್ಯೆಯನ್ನೂ ನೀಡಲಾಗುವುದು ಎಂದರು.

ಮಾಧ್ಯಮ ಅಕಾಡೆಮಿ ಮುಂದಿನ ದಿನಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಶಾಸ್ತ್ರೀಯ ನೃತ್ಯ, ರಂಗವಿಮರ್ಶೆ, ವ್ಯಂಗ್ಯಚಿತ್ರ, ಛಾಯಾಚಿತ್ರ, ಬರವಣಿಗೆ ಸೇರಿದಂತೆ ವಿವಿಧ ವಿಷಯಗಳ ಬಗೆಗೆ ಕಾರ್ಯಾಗಾರಗಳು ಸದ್ಯದಲ್ಲಿಯೇ ಆರಂಭಗೊಳ್ಳಲಿವೆ ಎಂದು ಸುಬ್ಬರಾವ್‌ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X