ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.1ರಿಂದ ಕರುನಾಡಲ್ಲಿ ಸಾಂಸ್ಕೃತಿಕ ದಿಬ್ಬಣದ ಮೆರಗು

By Staff
|
Google Oneindia Kannada News

ಅ.1ರಿಂದ ಕರುನಾಡಲ್ಲಿ ಸಾಂಸ್ಕೃತಿಕ ದಿಬ್ಬಣದ ಮೆರಗು
ಸುವರ್ಣ ಕರ್ನಾಟಕದ ಸಂಭ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡುಗೆ

ಬೆಂಗಳೂರು : ನವೆಂಬರ್‌ ತಿಂಗಳಲ್ಲಿ ಸುವರ್ಣ ಕರ್ನಾಟಕದ ಸಂಭ್ರಮವನ್ನು ಸ್ವಾಗತಿಸಲು, ಅಕ್ಟೋಬರ್‌ 1ರಿಂದ 31ರ ವರೆಗೆ ರಾಜ್ಯವ್ಯಾಪಿ‘ ಸುವರ್ಣ ಕರ್ನಾಟಕ ಸಂಸ್ಕೃತಿ ದಿಬ್ಬಣ’ ವನ್ನು ಸರ್ಕಾರ ಆಯೋಜಿಸಿದೆ.

ಮೂರು ಹಂತದಲ್ಲಿ ದಿಬ್ಬಣ ಆರಂಭಗೊಂಡು ಅ.31ರಂದು ಬೆಂಗಳೂರಿಗೆ ಆಗಮಿಸಿ ಅಂತ್ಯಗೊಳ್ಳಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಎಲ್ಲಾ ಅಕಾಡೆಮಿಗಳ ಸಂಯೋಜನೆಯಲ್ಲಿ ಈ ಸಂಸ್ಕೃತಿ ದಿಬ್ಬಣವನ್ನು ಆಯೋಜಿಸಲಾಗಿದೆ.

ನಾಡಿನ 8ವಿಶಿಷ್ಟ ಕ್ಷೇತ್ರಗಳಾದ ಬಸವ ಕಲ್ಯಾಣ, ಗುಳೇದ ಗುಡ್ಡ, ಮಹಾಲಿಂಗಪುರ, ಬನವಾಸಿ, ಹಂಪಿ, ಕುಂದಾಪುರ, ಬೇಲೂರು ಹಾಗೂ ಭಾಗಮಂಡಲದಲ್ಲಿ 9ದಿನಗಳ ಕಾಲ ದಿಬ್ಬಣ ನಡೆಯಲಿದೆ.

ಅಕ್ಟೋಬರ್‌ 1ರಿಂದ 9ರವರೆಗೆ ಚಾಮರಾಜನಗರದಲ್ಲಿ ಅಲ್ಲಿಂದ ಅ10ರಿಂದ 18ರವರೆಗೆ ಕಲ್ಬುರ್ಗಿಗೆ ದಿಬ್ಬಣ ಪ್ರವೇಶಿಸಲಿದೆ. ನಂತರ ಕೊಪ್ಪಳ, ಧಾರವಾಡ, ಶಿವಮೊಗ್ಗ, ದಾವಣಗೆರೆ, ದಕ್ಷಿಣ ಕನ್ನಡ, ತುಮಕೂರು, ಮೈಸೂರು ಜಿಲ್ಲೆಗಳಲ್ಲಿ ಸಂಚರಿಸಲಿದೆ.

ಅಕ್ಟೋಬರ್‌ 19ರಿಂದ 27ರ ವರೆಗೆ ವಿಜಾಪುರ, ರಾಯಚೂರು, ಗದಗ, ಉತ್ತರ ಕನ್ನಡ, ಚಿತ್ರದುರ್ಗ, ಚಿಕ್ಕಮಂಗಳೂರು, ಕೋಲಾರ ಹಾಗೂ ಮಂಡ್ಯದಲ್ಲಿ ಸಂಸ್ಕೃತಿ ದಿಬ್ಬಣ ಸಾಗಲಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X