ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂಡಮಾರುತದ ಅಬ್ಬರಕ್ಕೆ ಆಂಧ್ರದಲ್ಲಿ ಆರು ಬಲಿ

By Staff
|
Google Oneindia Kannada News

ಚಂಡಮಾರುತದ ಅಬ್ಬರಕ್ಕೆ ಆಂಧ್ರದಲ್ಲಿ ಆರು ಬಲಿ
ತತ್ತರಿಸಿದ ಆಂಧ್ರದ ಕರಾವಳಿ, ಸಾವಿರಾರು ಎಕರೆ ಕೃಷಿಭೂಮಿ ಜಲಾವೃತ ... ಬೆಂಗಳೂರಿನಲ್ಲಿ ಮೋಡ ...

ಹೈದರಾಬಾದ್‌ : ಆಂಧ್ರಪ್ರದೇಶದ ಕರಾವಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮದಿಂದ ಮಂಗಳವಾರ 6ಮಂದಿ ಮೃತಪಟ್ಟಿದ್ದು, ಪ್ರವಾಹ ಭೀತಿಯಲ್ಲಿದ್ದ ಸುಮಾರು 10,000ಮಂದಿ ಸುರಕ್ಷಿತ ಸ್ಥಳ ಸೇರಿಕೊಂಡಿದ್ದಾರೆ.

ರಾಜ್ಯಾಡಳಿತ ಪರಿಹಾರ ಕಾರ್ಯದಲ್ಲಿ ಮಗ್ನವಾಗಿದ್ದು, ಜನರನ್ನು ಸುರಕ್ಷಿತ ಪ್ರದೇಶಕ್ಕೆ ಕರೆತರಲಾಗುತ್ತಿದೆ. ಕರಾವಳಿ ಪ್ರದೇಶದಲ್ಲಿನ ಏಳು ಹಳ್ಳಿಗಳು ಸೇರಿದಂತೆ 50,000 ಎಕರೆ ಭೂಮಿ ಜಲಾವೃತಗೊಂಡಿದೆ. ಮಳೆಯಲ್ಲಿ 6 ಮಂದಿ ನೀರುಪಾಲಾಗಿದ್ದಾರೆ. ಮೃತರಲ್ಲಿ ಮೂರು ಮಂದಿ ಪಶ್ಚಿಮ ಗೋದಾವರಿ ಜಿಲ್ಲೆ, ಇಬ್ಬರು ವಿಶಾಖಪಟ್ಟಣ ಜಿಲ್ಲೆ ಮತ್ತು ಓರ್ವ ವ್ಯಕ್ತಿ ವಿಜಯನಗರಂ ಜಿಲ್ಲೆಗೆ ಸೇರಿದವರಾಗಿದ್ದಾರೆ.

ಖಮ್ಮಮ್‌ ಜಿಲ್ಲೆಯ ಭದ್ರಾಚಲಂನಲ್ಲಿ ಗೋದಾವರಿ ನದಿ ನೀರಿನ ಮಟ್ಟ 44.5 ಅಡಿ ದಾಟಿದ್ದು, ಕರಾವಳಿ ಪ್ರದೇಶದಲ್ಲಿ ಗಾಳಿಯು ಪ್ರತಿ ಗಂಟೆಗೆ 70ಕಿಲೋ ಮೀಟರ್‌ ವೇಗದಲ್ಲಿ ಬೀಸುತ್ತಿದೆ. ಇದರಿಂದ ಅಪಾರ ಬೆಳೆಹಾನಿ ಸಂಭವಿಸಿದ್ದು, ಸಾರಿಗೆ ಮತ್ತು ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.

ಶ್ರೀಕಾಕುಲಂ, ವಿಜಯನಗರಂ, ವಿಶಾಖಪಟ್ಟಣಂ, ಪಶ್ಚಿಮ ಮತ್ತು ಪೂರ್ವ ಗೋದಾವರಿ ಜಿಲ್ಲೆಗಳಲ್ಲಿ ಜನಜೀವನ ಅಸ್ಥವ್ಯಸ್ತಗೊಂಡಿದ್ದು, ವಾತಾವರಣ ವೈಪರೀತ್ಯದಿಂದ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಬೆಂಗಳೂರಿನಲ್ಲಿ ಮೋಡ : ಬಂಗಾಳ ಕೊಲ್ಲಿಯಲ್ಲಿನ ತೀವ್ರ ವಾಯುಭಾರ ಕುಸಿತದಿಂದ ಉಂಟಾಗಿರುವ ಚಂಡಮಾರುತದ ಪರಿಣಾಮ ಕರ್ನಾಟಕದ ಮೇಲು ಆಗುವ ಸಾಧ್ಯತೆಗಳಿವೆ.

ಸೋಮವಾರದಂತೆಯೇ ಮಂಗಳವಾರವೂ ಮೋಡ ಕವಿದ ವಾತಾವರಣ ರಾಜ್ಯದಲ್ಲಿ ಕಂಡು ಬಂದಿದೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X