ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಸ್ತ್ರ ವಿವಾದ : ಸಾನಿಯಾ ಮಿರ್ಜಾಗೆ ವಿಶೇಷ ಭದ್ರತೆ

By Staff
|
Google Oneindia Kannada News

ವಸ್ತ್ರ ವಿವಾದ : ಸಾನಿಯಾ ಮಿರ್ಜಾಗೆ ವಿಶೇಷ ಭದ್ರತೆ
ಸೋಮವಾರದಿಂದ ಸನ್‌ಫೀಸ್ಟ್‌ ಡಬ್ಲ್ಯುಟಿಎ ಮಹಿಳಾ ಓಪನ್‌ ಟೂರ್ನಿ

ಕೋಲ್ಕತ್ತ : ಮುಸ್ಲಿಂ ಸಂಘಟನೆಗಳ ಬೆದರಿಕೆ ಹಿನ್ನೆಲೆಯಲ್ಲಿ ಭಾರತದ ಟೆನ್ನಿಸ್‌ ತಾರೆ ಸಾನಿಯಾ ಮಿರ್ಜಾ ಅವರಿಗೆ ವಿಶೇಷ ಭದ್ರತೆ ಒದಗಿಸಲು ಪೊಲೀಸರು ನಿರ್ಧರಿಸಿದ್ದಾರೆ.

ಸೋಮವಾರ ಕೋಲ್ಕತ್ತದಲ್ಲಿ ಆರಂಭವಾಗುವ ಸನ್‌ಫೀಸ್ಟ್‌ ಡಬ್ಲ್ಯುಟಿಎ ಮಹಿಳಾ ಓಪನ್‌ ಟೂರ್ನಿ ಯಲ್ಲಿ ತುಂಡು ಬಟ್ಟೆ ಧರಿಸಿ ಸಾನಿಯಾ ಪಂದ್ಯ ಆಡಿದರೆ, ಆಟಕ್ಕೆ ಅಡ್ಡಿ ಪಡಿಸುವುದಾಗಿ ಕೋಲ್ಕತ್ತ ಮೂಲದ ಜಮಾಯತೆ-ಉಲೆಮಾ-ಎ-ಹಿಂದ್‌ ಸಂಘಟನೆ ಬೆದರಿಕೆವೊಡ್ಡಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ಭದ್ರತೆಗೆ ಮುಂದಾಗಿದ್ದಾರೆ.

ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿ ಸಾನಿಯಾ ತುಂಡು ಬಟ್ಟೆ ಧರಿಸುತ್ತಿದ್ದಾರೆ ಎಂಬ ಆರೋಪಗಳು, ಮೊದಲಿನಿಂದಲೂ ಮುಸ್ಲಿಂ ಸಂಘಟನೆಗಳಿಂದ ಕೇಳಿ ಬರುತ್ತಿವೆ. ಹೈದರಾಬಾದ್‌ ಮೂಲದ ಸಾನಿಯಾ, ಈ ವಸ್ತ್ರ ವಿವಾದದ ಬಗ್ಗೆ ತುಟಿಬಿಚ್ಚಿಲ್ಲ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X