ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿಂಗನಮಕ್ಕಿ ಜಲಾಶಯ ಈಗ ಭರ್ತಿ : ಕಣ್ಣಿಗೂ ಹಬ್ಬ

By Staff
|
Google Oneindia Kannada News

ಲಿಂಗನಮಕ್ಕಿ ಜಲಾಶಯ ಈಗ ಭರ್ತಿ : ಕಣ್ಣಿಗೂ ಹಬ್ಬ
ಜಲಾಶಯದ ಹೆಚ್ಚುವರಿ ನೀರನ್ನು ಹೊರಬಿಡಲು ಸಿದ್ಧತೆ

ಶಿವಮೊಗ್ಗ : ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1,818.60 ಅಡಿ ತಲುಪಿದ್ದು, ತುಂಬುವ ಹಂತದಲ್ಲಿದೆ. ಮಳೆ ಹೀಗೆಯೇ ಮುಂದುವರೆದರೆ ನೀರನ್ನು ಜಲಾಶಯದಿಂದ ಹೊರಬಿಡಲು ಸಿದ್ಧತೆ ನಡೆಸಲಾಗಿದೆ.

ಗುರುವಾರ ಬೆಳಗ್ಗೆಯಿಂದ ಸಂಜೆಯ ತನಕ ಜಲಾಶಯದ ಒಳಹರಿವು 22,235 ಕ್ಯುಸೆಕ್ಸ್‌ನಷ್ಟಿತ್ತು . ಹೆಚ್ಚುವರಿ ನೀರನ್ನು ಹೊರಬಿಡಲು ಯಾವುದೇ ಕ್ಷಣದಲ್ಲಿ ಬೇಕಾದರೂ ಜಲಾಶಯದ ಬಾಗಿಲುಗಳನ್ನು ತೆರೆಯಬಹುದು ಎಂದು ಅಧಿಕಾರಿಗಳು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಶರಾವತಿ ಯೋಜನೆಯ ಪ್ರಮುಖ ಅಂಗವಾಗಿರುವ ಲಿಂಗನಮಕ್ಕಿ ಜಲಾಶಯದ ಗರಿಷ್ಠ ಪ್ರಮಾಣ 1819 ಅಡಿಗಳು. 1818 ಅಡಿಯ ನಂತರ ಜಲಾಶಯಕ್ಕೆ 80 ಸಾವಿರ ಕ್ಯುಸೆಕ್‌ಗಿಂತ ಅಧಿಕ ನೀರು ಹರಿದು ಬಂದರೆ, ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತದೆ. ಗುರುವಾರ ರಾತ್ರಿ ಮಳೆಯ ಪ್ರಮಾಣ ಸಾಧಾರಣ ಮಟ್ಟದಲ್ಲಿತ್ತು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X