ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಕರ್ಣ ಮತ್ತು ಕಾರವಾರ ಬೀಚ್‌ಗಳ ಶುದ್ಧೀಕರಣ

By Staff
|
Google Oneindia Kannada News

ಗೋಕರ್ಣ ಮತ್ತು ಕಾರವಾರ ಬೀಚ್‌ಗಳ ಶುದ್ಧೀಕರಣ
ರಾಜ್ಯದ ಹತ್ತು ಬೀಚ್‌ಗಳ ಸ್ವಚ್ಚತೆಗೆ ಕೋಸ್ಟ್‌ ಗಾರ್ಡ್‌ ಕಾರ್ಯಕ್ರಮ

ಮಂಗಳೂರು : ಕಾರವಾರ ಮತ್ತು ಗೋಕರ್ಣ ಸೇರಿದಂತೆ ರಾಜ್ಯದ ಹತ್ತು ಸಮುದ್ರ ತೀರ(ಬೀಚ್‌)ಗಳನ್ನು ಸ್ವಚ್ಚಗೊಳಿಸುವ ಕಾರ್ಯಕ್ರಮ ಸೆ.17ರಿಂದ ಆರಂಭಗೊಳ್ಳಲಿದೆ.

ಅಂತಾರಾಷ್ಟ್ರೀಯ ಬೀಚ್‌ಗಳ ಸ್ವಚ್ಚತಾ ಕಾರ್ಯಕ್ರಮದ ಅಡಿಯಲ್ಲಿ ಕೋಸ್ಟ್‌ ಗಾರ್ಡ್‌ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ರಾಜ್ಯದ ಉಳ್ಳ, ತಣ್ಣೀರುಭಾವಿ, ಪಣಂಬೂರು, ಸೂರತ್ಕಲ್‌, ಮಲ್ಪೆ, ಕಾಪು, ಭಟ್ಕಳ ಮತ್ತು ಮುರುಡೇಶ್ವರ ಬೀಚ್‌ಗಳನ್ನು ಸ್ವಚ್ಚಪಡಿಸುವ ಕಾರ್ಯ ಆರಂಭಗೊಳ್ಳಲಿದೆ ಎಂದು ಕೋಸ್ಟ್‌ ಗಾರ್ಡ್‌ ಮುಖ್ಯಸ್ಥ ಎಸ್‌.ಕೆ.ಚೌಧರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಎನ್‌ಜಿಓ, ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X