ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹನಿಹನಿ ಸೇರಿದರೆ ಹಳ್ಳ : ಪಾಲಿಕೆಗೆ ಜ್ಞಾನೋದಯ

By Staff
|
Google Oneindia Kannada News

ಹನಿಹನಿ ಸೇರಿದರೆ ಹಳ್ಳ : ಪಾಲಿಕೆಗೆ ಜ್ಞಾನೋದಯ
ಪಾಲಿಕೆ ವ್ಯಾಪ್ತಿಯಲ್ಲಿ ಮಳೆ ಕೊಯ್ಲು ಸಾಧನ ಅಳವಡಿಕೆ -ಆರ್‌.ನಾರಾಯಣಸ್ವಾಮಿ

ಬೆಂಗಳೂರು : ಮಹಾನಗರ ಪಾಲಿಕೆ ಮಳೆ ನೀರು ಸಂಗ್ರಹವನ್ನು ಪ್ರೋತ್ಸಾಹಿಸಲು ಮುಂದಾಗಿದ್ದು, ತಮ್ಮ ಮನೆಗಳಲ್ಲಿ ಮಳೆ ಕೊಯ್ಲು ಯೋಜನೆ ಅನುಸರಿಸುವ ಸಾರ್ವಜನಿಕರಿಗೆ ಒಂದು ಸಾವಿರ ರೂ.ಗಳ ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದೆ.

ಈ ಬಗ್ಗೆ ಪಾಲಿಕೆ ಆಯುಕ್ತ ಜ್ಯೋತಿರಾಮ ಲಿಂಗಂ ಸುದ್ದಿಗಾರರಿಗೆ ಮಾಹಿತಿ ನೀಡಿದ್ದು, ಯೋಜನೆ, 2004 ಜುಲೈ ತಿಂಗಳಿಗೂ ಮೊದಲು ನಿರ್ಮಿಸಿರುವ ಕಟ್ಟಡಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದರು.

ಸೆಂಟರ್‌ ಫಾರ್‌ ಸಸ್ಟೇನಬಲ್‌ ಡೆವಲಪ್‌ಮೆಂಟ್‌(ಸಿಎಸ್‌ಡಿ) ಸಂಸ್ಥೆ ವತಿಯಿಂದ ಮಳೆ ನೀರಿನ ಕೊಯ್ಲು ಸಾಧನ ಅಳವಡಿಸಿಕೊಳ್ಳುವ ಮೊದಲ 5000 ಅರ್ಜಿದಾರರಿಗೆ ಈ ಸಬ್ಸಿಡಿ ಲಭ್ಯ. ತಮಿಳುನಾಡು ಮಾದರಿಯಲ್ಲಿ ಮಳೆ ನೀರು ಸಂಗ್ರಹಣೆ ಕಡ್ಡಾಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕಾನೂನು ರೂಪಿಸಿದರೆ ಸೂಕ್ತ ಎಂದು ಜ್ಯೋತಿ ರಾಮಲಿಂಗಂ ಹೇಳಿದರು.

ಒಪ್ಪಂದ : ಪಾಲಿಕೆ ವ್ಯಾಪ್ತಿಯ ಶಿಕ್ಷಣ ಸಂಸ್ಥೆ ಮತ್ತು ಇತರೆ ಕಟ್ಟಡಗಳು, 163ಆಟದ ಮೈದಾನ, 565 ಉದ್ಯಾನ ಮತ್ತಿತರ ಪ್ರದೇಶಗಳಲ್ಲಿ ಮಳೆ ನೀರು ಸಂಗ್ರಹಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಸೆಂಟರ್‌ ಫಾರ್‌ ಸಸ್ಟೇನಬಲ್‌ ಡೆವಲಪ್‌ಮೆಂಟ್‌ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಮೇಯರ್‌ ಆರ್‌. ನಾರಾಯಣಸ್ವಾಮಿ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X