ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ವಿಜ್ಞಾನಿ ಗುಪ್ತಾಗೆ ವಿಶ್ವ ಆಹಾರ ಪ್ರಶಸ್ತಿ

By Staff
|
Google Oneindia Kannada News

ಭಾರತೀಯ ವಿಜ್ಞಾನಿ ಗುಪ್ತಾಗೆ ವಿಶ್ವ ಆಹಾರ ಪ್ರಶಸ್ತಿ
ಪ್ರಶಸ್ತಿ ಮೊತ್ತ 2,50,000 ಯುಎಸ್‌ ಡಾಲರ್‌, ಗುಪ್ತಾ ಕೊಡುಗೆಯ ಶ್ಲಾಘನೆ

ನವದೆಹಲಿ : ಭಾರತೀಯ ವಿಜ್ಞಾನಿ ಮೋದಡಗು ವಿ. ಗುಪ್ತಾ , ಮೀನು ಕೃಷಿಯಲ್ಲಿ ಪೌಷ್ಟಿಕಾಂಶ ವರ್ಧನೆಗಾಗಿ 2,50,000 ಯುಎಸ್‌ ಡಾಲರು ಮೊತ್ತದ ವಿಶ್ವ ಆಹಾರ ಪ್ರಶಸ್ತಿ ಪಡೆದಿದ್ದಾರೆ.

ವಿಶ್ವ ಆಹಾರ ಪ್ರಶಸ್ತಿ ಪ್ರತಿಷ್ಠಾನದ ಅಧ್ಯಕ್ಷ ಕೆನೆತ್‌ ಎಂ. ಕ್ವಿನ್‌, ಗುರುವಾರ ವಾಷಿಂಗ್ಟನ್‌ನಲ್ಲಿ ಪ್ರಶಸ್ತಿ ಘೋಷಿಸಿದ್ದಾರೆ. ಗುಪ್ತಾ ಅವರ ಪೌಷ್ಟಿಕಾಂಶ ವರ್ಧನೆಯ ಫಲವನ್ನು ಏಷ್ಯಾ ಮತ್ತು ಆಫ್ರಿಕಾದ ಹತ್ತು ಲಕ್ಷಕ್ಕೂ ಅಧಿಕ ಜನ ಪಡೆದುಕೊಂಡಿದ್ದಾರೆ. ಅವರು ಮೂರು ದಶಕಗಳಿಗಿಂತಲೂ ಹೆಚ್ಚುಕಾಲ ವಿಶ್ವ ಮೀನು ಕೇಂದ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.

ಗುಪ್ತಾ ಅವರ ಪರಿಶ್ರಮದಿಂದ ಏಷ್ಯಾ ಮತ್ತು ಆಫ್ರಿಕಾದ ಮೀನು ಉತ್ಪಾದನೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಅವರ ಈ ಎಲ್ಲ ಕಾರ್ಯಗಳನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕ್ವಿನ್‌ ತಿಳಿಸಿದರು.

ಸಂಸ್ಥೆಯು 1986ರಲ್ಲಿ ಸ್ಥಾಪನೆಯಾಗಿದ್ದು, ಗುಪ್ತಾ ಅವರು ಈ ಪ್ರಶಸ್ತಿಯನ್ನು ಪಡೆಯುತ್ತಿರುವ 6ನೇ ಭಾರತೀಯ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಮೊದಲು ಎಂ.ಎಸ್‌.ಸ್ವಾಮಿನಾಥನ್‌, ವರ್ಗೀಸ್‌ ಕುರಿಯನ್‌, ಗುರುದೇವ್‌ ಖುಶ್‌, ಬಿ.ಆರ್‌.ಬರ್ವಾಲೆ ಮತ್ತು ಸುರಿಂದರ್‌ ಕೆ. ವಾಸಲ್‌ ಈ ಪ್ರಶಸ್ತಿ ಪಡೆದಿದ್ದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X