ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಬಲ್‌ ಆಪರೇಟರ್‌ಗಳ ಮುಷ್ಕರದಿಂದ ಟಿ.ವಿ.ಬಂದ್‌!

By Staff
|
Google Oneindia Kannada News

ಕೇಬಲ್‌ ಆಪರೇಟರ್‌ಗಳ ಮುಷ್ಕರದಿಂದ ಟಿ.ವಿ.ಬಂದ್‌!
ಹೆಚ್ಚುವರಿ ಮನರಂಜನಾ ತೆರಿಗೆ ವಿರೋಧಿಸಿ ಅನಿರ್ದಿಷ್ಟ ಕಾಲ ಪ್ರತಿಭಟನೆ

ಬೆಂಗಳೂರು : ಗೌರಿ-ಗಣೇಶನ ಹಬ್ಬ ಮಾಡುವ ಹೊತ್ತಿನಲ್ಲಿಯೇ ರಾಜ್ಯದೆಲ್ಲೆಡೆ ಕೇಬಲ್‌ ಆಪರೇಟರ್‌ಗಳು ಸರ್ಕಾರದ ವಿರುದ್ಧ ಮುಷ್ಕರಕ್ಕೆ ನಿಂತಿದ್ದಾರೆ. ಆ ಪರಿಣಾಮ ಸೋಮವಾರ ರಾತ್ರಿ 8ರಿಂದ ಮನೆಯಲ್ಲಿನ ಟೆಲಿವಿಷನ್‌ ಸೆಟ್‌ಗಳು ಸ್ತಬ್ಧಗೊಂಡಿವೆ.

ಮಂಗಳವಾರವೂ ಪರಿಸ್ಥಿತಿ ತಿಳಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಬಲ್‌ ಆಪರೇಟರ್‌ಗಳ ಸಂಘದ ಒಕ್ಕೂಟ, ಕೇಬಲ್‌ ಆಪರೇಟರ್‌ಗಳು ಮನರಂಜನಾ ತೆರಿಗೆ ಪಾವತಿಸುತ್ತಿದ್ದರೂ, ರಾಜ್ಯಸರ್ಕಾರ ಮತ್ತೆ ಶೇ. 10ರಷ್ಟು ಹೆಚ್ಚುವರಿ ಮನರಂಜನಾ ತೆರಿಗೆಯನ್ನು ವಿಧಿಸುತ್ತಿದೆ. ಸರ್ಕಾರದ ಧೋರಣೆ ವಿರೋಧಿಸಿ ಅನಿರ್ದಿಷ್ಟ ಕಾಲ ಮುಷ್ಕರ ನಡೆಸುತ್ತಿರುವುದಾಗಿ ತಿಳಿಸಿದೆ.

ಹೊರ ರಾಜ್ಯಗಳಲ್ಲಿ ಮನರಂಜನಾ ತೆರಿಗೆ ಮಾತ್ರವಿದೆ. ಆದರೆ ಇಲ್ಲಿ ಮನರಂಜನಾ ತೆರಿಗೆಯ ಜೊತೆಗೆ ಮಲ್ಟಿ ಸಿಸ್ಟಮ್‌ ಆಪರೇಟರ್‌(ಎಂಎಸ್‌ಒ) ಮೇಲೆ ರಾಜ್ಯ ಸರ್ಕಾರ ಹೆಚ್ಚುವರಿ ತೆರಿಗೆ ವಿಧಿಸುತ್ತಿದೆ. ಈ ತೆರಿಗೆ ರದ್ಧತಿಗೆ ಕೋರಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿರುವುದಾಗಿ ಒಕ್ಕೂಟ ತಿಳಿಸಿದೆ.

ಒಂದು ಪಕ್ಷ ಎಂಎಸ್‌ಒ ಮೇಲೆ ತೆರಿಗೆ ಮುಂದುವರೆದರೆ, ಗ್ರಾಹಕರ ಮೇಲೆ ಮತ್ತಷ್ಟು ಹೊರೆ ಬೀಳಲಿದೆ. ಸರ್ಕಾರ ಈ ಬಗ್ಗೆ ಗಮನಹರಿಸಬೇಕೆಂದು ಒಕ್ಕೂಟ ಆಗ್ರಹಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X