ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡೇನೇಷ್ಯ ಜೆಟ್‌ ದುರಂತ : ಸತ್ತವರ ಸಂಖ್ಯೆ 141

By Staff
|
Google Oneindia Kannada News

ಇಂಡೇನೇಷ್ಯ ಜೆಟ್‌ ದುರಂತ : ಸತ್ತವರ ಸಂಖ್ಯೆ 141
ಚಾಲಕನ ನಿಯಂತ್ರಣ ತಪ್ಪಿ ನೆಲಕ್ಕುರುಳಿದ ವಿಮಾನ, ಆರು ಮಂದಿ ಪಾರು

ಜಕಾರ್ತಾ : ಇಂಡೋನೇಷ್ಯದಲ್ಲಿ ಜೆಟ್‌ವಿಮಾನವು ಸೋಮವಾರ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ 141ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

ಮಂಡಲಾ ಏರ್‌ಲೈನ್ಸ್‌ ಬೋಯಿಂಗ್‌ 737, ಮಂಡಲಾ ನಗರದಿಂದ ಜಕಾರ್ತಾಗೆ ಹೊರಟ್ಟಿತ್ತು. ವಿಮಾನವು ಹಾರಿದ ಕೆಲವೇ ಕ್ಷಣದಲ್ಲಿ ಚಾಲಕನ ನಿಯಂತ್ರಣ ತಪ್ಪಿ, ಬೆಂಕಿ ಹತ್ತಿಕೊಂಡು ನೆಲಕ್ಕೆ ಉರುಳಿತು. ಇದರ ಪರಿಣಾಮವಾಗಿ ವಸತಿ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದ್ದು, ಉತ್ತರ ಸುಮಾತ್ರಾ ಪ್ರಾಂತದ ರಾಜ್ಯಪಾಲರೂ ಸೇರಿದಂತೆ ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ವರ್ಗದವರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆರು ಮಂದಿ ಪ್ರಯಾಣಿಕರು ಆಶ್ಚರ್ಯಕರ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಸಾವಿನ ಸಂಖ್ಯೆಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಒಂಬತ್ತು ತಿಂಗಳಲ್ಲಿ ಇಂಡೋನೇಷ್ಯಾದಲ್ಲಿ ಇದು ಎರಡನೇ ದೊಡ್ಡ ದುರಂತ.

ನೂರಾರು ಪೊಲೀಸರು, ವೈದ್ಯಕೀಯ ಸಿಬ್ಬಂದಿ ಮತ್ತು ಸಾರ್ವಜನಿಕರು ಘಟನಾ ಸ್ಥಳದಲ್ಲಿ ಹೆಚ್ಚಿನ ಅನಾಹುತ ತಪ್ಪಿಸಲು ಕಾರ್ಯ ಪ್ರವೃತ್ತರಾಗಿದ್ದಾರೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X