ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುಂಚನಗಿರಿ ಶ್ರೀಗಳು ಮತ್ತು ಸಿದ್ದು ನಡುವೆ ಗುಸುಗುಸು

By Staff
|
Google Oneindia Kannada News

ಚುಂಚನಗಿರಿ ಶ್ರೀಗಳು ಮತ್ತು ಸಿದ್ದು ನಡುವೆ ಗುಸುಗುಸು
ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವವರನ್ನು ನಾವು ಬೆಂಬಲಿಸುತ್ತೇವೆ -ಶ್ರೀ ಬಾಲಗಂಗಾಧರನಾಥ ಸ್ವಾಮಿ

ಬೆಂಗಳೂರು : ಒಂದು ಕಾಲದಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ ಅತ್ಯಂತ ಆಪ್ತ ಗುರುಗಳಾಗಿದ್ದ ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಮಾಜಿ ಉಪ ಮುಖ್ಯಮಂತ್ರಿ ಮತ್ತು ಜೆಡಿಎಸ್‌ನ ರೆಬಲ್‌ ನಾಯಕ ಸಿದ್ದರಾಮಯ್ಯ ಅವರ ನಡುವೆ ಮಹತ್ವದ ಚರ್ಚೆ ನಡೆದಿದೆ.

ಸುಮಾರು 45 ನಿಮಿಷಗಳ ಕಾಲ ವಿಜಯನಗರದಲ್ಲಿರುವ ಆದಿ ಚುಂಚನಗಿರಿ ಶಾಖಾ ಮಠದಲ್ಲಿ ಮಾತುಕತೆ ನಡೆದಿದ್ದು, ಹೆಚ್ಚಿನ ವಿವರಗಳು ತಿಳಿದು ಬಂದಿಲ್ಲ. ಮಾತುಕತೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಇದು ರಾಜಕೀಯ ಭೇಟಿಯಲ್ಲ, ಶ್ರೀಗಳ ಆರ್ಶೀವಾದ ಪಡೆಯಲು ಬಂದಿದ್ದಾಗಿ ತಿಳಿಸಿದ್ದಾರೆ.

ಹಾಸನದಲ್ಲಿ ಈ ತಿಂಗಳ 26ರಂದು ಅಹಿಂದ ಸಮಾವೇಶ ನಡೆಸಲು ಯೋಚಿಸುತ್ತಿದ್ದೇವೆ. ನಂತರ ಗುಲ್ಬರ್ಗದಲ್ಲಿಯೂ ನಡೆಸಲಾಗುವುದು. ಸಾಮಾಜಿಕ ನ್ಯಾಯಕ್ಕಾಗಿ ನಡೆಸಲಾಗುತ್ತಿರುವ ಪಕ್ಷರಹಿತ ಅಹಿಂದ ಚಳವಳಿಯನ್ನು ಶ್ರೀಗಳು ಬೆಂಬಲಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಾಲಗಂಗಾಧರನಾಥ ಸ್ವಾಮೀಜಿ, ನಾವು ಯಾರಿಂದಲೂ ಅಂತರ ಕಾಯ್ದುಕೊಳ್ಳುವುದಿಲ್ಲ. ಹತ್ತಿರ ಬಂದವರನ್ನು ಪ್ರೀತಿಸುತ್ತೇವೆ ಎಂದು ದೇವೇಗೌಡರು ಮತ್ತು ಸಿದ್ದರಾಮಯ್ಯ ಅವರನ್ನು ಕುರಿತು ಮಾರ್ಮಿಕವಾಗಿ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X