ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಯಿಲಿಗೆ ದೇಶದ ಆಡಳಿತ ಸುಧಾರಣೆಯ ಹೊಣೆ

By Staff
|
Google Oneindia Kannada News

ಮೊಯಿಲಿಗೆ ದೇಶದ ಆಡಳಿತ ಸುಧಾರಣೆಯ ಹೊಣೆ
ದೇಶವನ್ನು ಸೂಪರ್‌ ಪವರ್‌ ಮಾಡಲು ಬದ್ಧ -ವೀರಪ್ಪ ಮೊಯಿಲಿ

ನವದೆಹಲಿ : ಕೇಂದ್ರದ ಎರಡನೇ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಕಾಂಗ್ರೆಸ್‌ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ನೇಮಕಗೊಂಡಿದ್ದಾರೆ.

ಆಡಳಿತ ಯಂತ್ರವನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಆಯೋಗ ನೀಲನಕ್ಷೆಯನ್ನು ತಯಾರಿಸಲಿದೆ. ಎಲ್ಲ ಹಂತಗಳಲ್ಲೂ ಜವಬ್ದಾರಿಯುತ ಮತ್ತು ಪ್ರಗತಿಪರ ಆಡಳಿತ ವ್ಯವಸ್ಥೆ ರೂಪಿಸಲು ಪೂರಕವಾಗುವ ಸೂತ್ರಗಳನ್ನು ವರ್ಷದೊಳಗೆ ಮೊಯಿಲಿ ನೇತೃತ್ವದ ಆಯೋಗ ಸೂಚಿಸಲಿದೆ. ವೀರಪ್ಪ ಮೊಯಿಲಿ ಸೆ.8ರಂದು ಅಧಿಕಾರ ಸ್ವೀಕರಿಸುವರು.

ವಿ.ರಾಮಚಂದ್ರನ್‌, ಡಾ.ಪಿ.ಮುಖರ್ಜಿ, ಡಾ. ಎಚ್‌.ಕಾಲ್ರೊ ಮತ್ತು ಡಾ.ಜಯಪ್ರಕಾಶ್‌ ನಾರಾಯಣ್‌ ಅವರು ಆಯೋಗದ ಸದಸ್ಯರಾಗಿದ್ದು, ಐಎಎಸ್‌ ಅಧಿಕಾರಿ ವಿನೀತಾ ರಾಯ್‌ ಸದಸ್ಯ ಕಾರ್ಯದರ್ಶಿಯಾಗಿ ಆಯೋಗದಲ್ಲಿದ್ದಾರೆ.

1964ರಲ್ಲಿ ಮೊರಾರ್ಜಿ ದೇಸಾಯಿ ಅಧ್ಯಕ್ಷತೆಯಲ್ಲಿ ಮೊದಲ ಆಯೋಗ ಅಸ್ತಿತ್ವಕ್ಕೆ ಬಂದಿತ್ತು. ಸುಮಾರು 44ವರ್ಷಗಳ ನಂತರ ಎರಡನೇ ಆಯೋಗ ರೂಪುಗೊಂಡಿದೆ.

ದೇಶಕ್ಕೆ ಚೈತನ್ಯ : ಈಗಲೂ ಭಾರತದಲ್ಲಿ ಓಬೀರಾಯನ ಕಾಲದ ಆಡಳಿತ ಪದ್ಧತಿಯೇ ಅಸ್ತಿತ್ವದಲ್ಲಿದೆ. ಆಂಗ್ಲರ ವ್ಯವಸ್ಥೆಯ ನೆರಳು ಭಾರತದಲ್ಲಿದೆ. ದೇಶವನ್ನು ಸೂಪರ್‌ ಪವರ್‌ ಮಾಡಲು ಅಗತ್ಯ ಕ್ರಮಗಳ ಬಗ್ಗೆ ಕೇಂದ್ರ ಸುಧಾರಣಾ ಆಯೋಗ ಚಿಂತನೆ ನಡೆಸಲಿದೆ ಎಂದು ಆಯೋಗದ ನೂತನ ಅಧ್ಯಕ್ಷ ವೀರಪ್ಪ ಮೊಯಿಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X