ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಪಾಕ್‌ನ ಮುಖ್ಯನ್ಯಾಯಮೂರ್ತಿ ಹಿಂದೂ...!?

By Staff
|
Google Oneindia Kannada News

ಇಂದು ಪಾಕ್‌ನ ಮುಖ್ಯನ್ಯಾಯಮೂರ್ತಿ ಹಿಂದೂ...!?
ನ್ಯಾಯಮೂರ್ತಿ ಚೌಧರಿ ಅವರ ಚೀನಾ ಪ್ರವಾಸದ ಫಲವಾಗಿ ಹಂಗಾಮಿ ನ್ಯಾಯಮೂರ್ತಿಯಾಗಿ ಭಗವಾನ್‌ದಾಸ್‌ ಆಯ್ಕೆ

ಇಸ್ಲಾಮಾಬಾದ್‌ : ಹಿಂದೂ ಧರ್ಮದ ನ್ಯಾಯಮೂರ್ತಿ ರಾಣಾ ಭಗವಾನ್‌ದಾಸ್‌ ಅವರು ಪಾಕಿಸ್ತಾನದ ಸುಪ್ರೀಮ್‌ ಕೋರ್ಟ್‌ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದಾರೆ.

ಕರಾಚಿಯಲ್ಲಿರುವ ಸುಪ್ರೀಮ್‌ಕೋರ್ಟ್‌ನ ಸಿಂಧ್‌ ಪೀಠದಲ್ಲಿ ಶುಕ್ರವಾರ ಅವರು ಪ್ರಮಾಣ ವಚನ ಸ್ವೀಕರಿಸುವರು. ಹಾಲಿ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್‌ ಮುಹಮ್ಮದ್‌ ಚೌಧರಿ ಅವರು 10ದಿನಗಳ ಚೀನಾ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಭಗವಾನ್‌ದಾಸ್‌ ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದಾರೆ.

ಡಿಸೆಂಬರ್‌ 20, 1942ರಂದು ಸಿಂಧ್‌ ಪ್ರಾಂತ್ಯದ ಹಿಂದೂ ಕುಟುಂಬವೊಂದರಲ್ಲಿ ಜನಿಸಿದ ಭಗವಾನ್‌ ದಾಸ್‌, 1967ರಲ್ಲಿ ಪಾಕಿಸ್ತಾನ ನ್ಯಾಯಾಂಗ ಸೇವೆಗೆ ಸೇರ್ಪಡೆಯಾದರು. ಪಾಕ್‌ನ ಎರಡನೇ ಮುಸ್ಲಿಮೇತರ ಮುಖ್ಯ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಇದಕ್ಕೂ ಮೊದಲು ಕ್ರೆೃಸ್ತ ಧರ್ಮದವರಾದ ಎ.ಆರ್‌.ಕಾರ್ನೇಲಿಯಸ್‌ 1960ರಿಂದ 1968ರವರೆಗೆ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಇತಿಹಾಸವಿದೆ. ನ್ಯಾಯಮೂರ್ತಿ ಭಗವಾನ್‌ದಾಸ್‌, ಕಾನೂನು ಪದವೀಧರರಲ್ಲದೇ ಇಸ್ಲಾಮಿಕ್‌ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿಯನ್ನೂ ಗಳಿಸಿದ್ದಾರೆ.
(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X