ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3120ಕೋಟಿ ರೂ.ಅಪಮೌಲ್ಯವಾದ್ರೆ ಹೆಂಗೆ ಶಿವಾ?

By Staff
|
Google Oneindia Kannada News

3120ಕೋಟಿ ರೂ.ಅಪಮೌಲ್ಯವಾದ್ರೆ ಹೆಂಗೆ ಶಿವಾ?
ಮೈಸೂರು ಟಂಕಶಾಲೆ ಹಗರಣಗಳ ಸಮಗ್ರ ತನಿಖೆಗೆ ಎ.ರಾಮದಾಸ್‌ ಒತ್ತಾಯ

ಮೈಸೂರು : ಮೈಸೂರು ನೋಟು ಮುದ್ರಣ ಘಟಕದಲ್ಲಿನ ಅಚಾತುರ್ಯದಿಂದ 3120 ಕೋಟಿ ರೂ.ಮೌಲ್ಯದ ದೋಷಪೂರಿತ ನೋಟುಗಳು ಹೊರಬಿದ್ದಿವೆ. ಈ ಹಿನ್ನೆಲೆಯಲ್ಲಿ ತನಿಖೆ ಪೂರ್ಣವಾಗುವ ತನಕ ನೋಟು ಮುದ್ರಣವನ್ನು ಸ್ಥಗಿತಗೊಳಿಸಲು ರಿಸರ್ವ್‌ ಬ್ಯಾಂಕ್‌ ಆದೇಶ ನೀಡಿದೆ.

ಈ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನೋಟು ಮುದ್ರಣಾಲಯದ ನೌಕರರ ಸಂಘದ ಗೌರವಾಧ್ಯಕ್ಷ ಎ. ರಾಮದಾಸ್‌, 1000, 500 ಮತ್ತು 100ರೂ. ಮುಖಬೆಲೆಯ ದೋಷಪೂರಿತ ನೋಟುಗಳಲ್ಲಿ ಕೆಲವು ವಿವರಗಳು ಮುದ್ರಣಗೊಂಡಿರುವುದಿಲ್ಲ. ಮೈಸೂರು ನೋಟು ಮುದ್ರಣಾಲಯದಿಂದ ಕಳಪೆ ದೋಷಪೂರಿತ ನೋಟುಗಳು ಹೊರಬರುತ್ತಿರುವುದರಿಂದ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ಈ ಮುದ್ರಣ ಘಟಕದಲ್ಲಿನ 50 ಲಕ್ಷ ರೂ. ನಾಪತ್ತೆ ಪ್ರಕರಣ ಮರೆಯುವ ಮುನ್ನವೇ ಹೊಸ ಪ್ರಕರಣ ಬೆಳಕಿಗೆ ಬಂದಿದೆ. ದೋಷ ಪೂರಿತ ನೋಟುಗಳ ಮೂಲಕ ದೇಶದ ಅರ್ಥವ್ಯವಸ್ಥೆ ಹಾಳು ಮಾಡುವ ಹುನ್ನಾರ ಇದಾಗಿದೆ. ಸಮಗ್ರ ತನಿಖೆಯ ಮೂಲಕ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X