• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಂಬಿ, ಬಾಂಬ್‌ ಇಟ್ಟದ್ದು ನಾವಲ್ಲ... ನಕ್ಸಲರ ಉವಾಚ

By Staff
|

ನಂಬಿ, ಬಾಂಬ್‌ ಇಟ್ಟದ್ದು ನಾವಲ್ಲ... ನಕ್ಸಲರ ಉವಾಚ

ಮಾಧ್ಯಮಗಳ ಕಚೇರಿಗೆ ಅಂಚೆ ಮೂಲಕ ನಕ್ಸಲರ ಸಂದೇಶ

ಬೆಂಗಳೂರು : ಕಳೆದ ವಾರ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಚೇರಿಯಲ್ಲಿ ಇರಿಸಲಾಗಿದ್ದ ಬಾಂಬ್‌ ಪ್ರಕರಣಗಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ನಕ್ಸಲೀಯ ಸಂಘಟನೆ(ಸಿಪಿಐ ಮಾವೋವಾದಿ) ಹೇಳಿಕೊಂಡಿದೆ.

ಅಂಚೆ ಮೂಲಕ ಬುಧವಾರ ಮಾಧ್ಯಮ ಕಚೇರಿಗಳಿಗೆ ಸಂಘಟನೆ ಪ್ರಕಟಣೆಯನ್ನು ಕಳಿಸಿದೆ. ನಾವು ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ, ಧೈರ್ಯವಾಗಿ ಜವಾಬ್ದಾರಿ ಹೊತ್ತುಕೊಳ್ಳುತ್ತೇವೆಯೇ ಹೊರತು ಠಕ್ಕ(ಪಲಾಯನ) ಮಾರ್ಗವನ್ನು ಅನುಸರಿಸುವುದಿಲ್ಲ . ನಮ್ಮ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು. ಘಟನೆಯ ಕುರಿತು ಮುಖ್ಯಮಂತ್ರಿ ಧರ್ಮಸಿಂಗ್‌ ಮತ್ತು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಕ್ಸಲೀಯರ ಕೈವಾಡವಿರಬಹುದು ಎಂಬ ಸಂಶಯ ವ್ಯಕ್ತಪಡಿಸಿರುವುದನ್ನು ಅದು ಖಂಡಿಸಿದೆ.

ಇದು ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಬೆಳೆಯುತ್ತಿರುವ ಚಳವಳಿ. ಅಷ್ಟೇ ಅಲ್ಲದೆ ಶೋಷಿತ ಜನರ ವಿಮುಕ್ತಿಗಾಗಿ ಹೋರಾಡುತ್ತಿರುವ ಕ್ರಾಂತಿಕಾರಿ ಪಕ್ಷ. ಬಂದೂಕು ಮುಂತಾದ ಆಯುಧಗಳನ್ನು ಅವಶ್ಯಕ ಎನಿಸುವ ಸಂದರ್ಭದಲ್ಲಿ ಉಪಯೋಗಿಸುತ್ತೇವೆಯೇ ಹೊರತು ಅನಗತ್ಯವಾಗಿ, ಕ್ರೂರವಾಗಿ ಕೈಗೆತ್ತಿಕೊಳ್ಳುವುದಿಲ್ಲ.

ಆದರೆ ಸರ್ಕಾರ, ನಮ್ಮ ಕುರಿತು ಜನರ ಮನಸ್ಸುಗಳಲ್ಲಿ ತಪ್ಪು ಮಾಹಿತಿಯನ್ನು ತುಂಬಿ, ನಮ್ಮ ವಿರುದ್ಧ ಎತ್ತಿಕಟ್ಟುವ ಪ್ರಯತ್ನಮಾಡುತ್ತಿದೆ. ಸಂಘಟನೆ ನಿಷೇಧಿಸುವ ಕುರಿತು ಸರ್ಕಾರ ಯೋಚಿಸುತ್ತಿರುವುದು ಖಂಡನೀಯ ಎಂದು ಅದು ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more