ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಗೇನಕಲ್‌ ಫಾಲ್ಸ್‌ ಸೌಂದರ್ಯವೃದ್ಧಿಗೆ 1.5 ಕೋಟಿ

By Staff
|
Google Oneindia Kannada News

ಹೊಗೇನಕಲ್‌ ಫಾಲ್ಸ್‌ ಸೌಂದರ್ಯವೃದ್ಧಿಗೆ 1.5 ಕೋಟಿ
ಹೊಗೇನಕಲ್‌ ಜಲಪಾತಕ್ಕೆ ಪ್ರತಿನಿತ್ಯ ಎರಡು ಸಾವಿರ ಪ್ರವಾಸಿಕರ ಭೇಟಿ

ಬೆಂಗಳೂರು : ಹೊಗೇನಕಲ್‌ ಜಲಪಾತದ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಮೂಲಕ ಮತ್ತಷ್ಟು ಪ್ರವಾಸಿಕರನ್ನು ಸೆಳೆಯಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಸುಮಾರು 1.5ಕೋಟಿ ರೂ.ಗಳ ಯೋಜನೆಯನ್ನು ರೂಪಿಸಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ತಮಿಳುನಾಡು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಆರ್‌. ಪೆರುಮಾಳಸ್ವಾಮಿ, ಈ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳು ಪ್ರಸ್ತುತ ಆರಂಭಗೊಂಡಿವೆ ಎಂದರು.

ಜಲಪಾತದ ವ್ಯಾಪ್ತಿಯಲ್ಲಿನ ರಾಜ್ಯ ಸರ್ಕಾರದ ಅಧೀನದಲ್ಲಿನ ಹೋಟೆಲ್‌ಗಳು, ರಸ್ತೆ, ಸೇತುವೆ ಮತ್ತು ವಸತಿ ಸಮುಚ್ಛಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು. ಔಷಧಿ ಸಸ್ಯಗಳ ತವರಾದ ಹೊಗೇನಕಲ್‌ ಜಲಪಾತದ ವೀಕ್ಷಣೆಗೆ ಪ್ರಸ್ತುತ ದಿನವೊಂದಕ್ಕೆ ಎರಡು ಸಾವಿರ ಪ್ರವಾಸಿಕರು ಆಗಮಿಸುತ್ತಿದ್ದಾರೆ ಎಂದು ಪೆರುಮಾಳಸ್ವಾಮಿ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X