ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಹನ ಚಾಲಕರೇ, ದಂಡ ತೆರಬೇಕಾದೀತು ಜೋಕೆ!

By Staff
|
Google Oneindia Kannada News

ವಾಹನ ಚಾಲಕರೇ, ದಂಡ ತೆರಬೇಕಾದೀತು ಜೋಕೆ!
ಹತ್ತು ದಿನದಲ್ಲಿ 2833 ವಾಹನಗಳ ವಿರುದ್ಧ ಸಾರಿಗೆ ಅಧಿಕಾರಿಗಳಿಂದ ಪ್ರಕರಣ

ಬೆಂಗಳೂರು : ಸಾರಿಗೆ ಇಲಾಖೆ ಆಗಸ್ಟ್‌ 17ರಿಂದ ನಡೆಸಿದ 10ದಿನಗಳ ವಿಶೇಷ ತಪಾಸಣೆಯಲ್ಲಿ 2833ವಾಹನಗಳ ಮೇಲೆ ಪ್ರಕರಣ ದಾಖಲಿಸಿ ಸುಮಾರು 19.79ಲಕ್ಷರೂ. ದಂಡ ಹಾಗೂ ತೆರಿಗೆ ವಸೂಲಿ ಮಾಡಿದೆ ಎಂದು ಸಾರಿಗೆ ಆಯುಕ್ತ ಓಂ ಪ್ರಕಾಶ್‌ ತಿಳಿಸಿದ್ದಾರೆ.

ವಿಪರೀತ ಹೊಗೆ ಉಗುಳುವ 1178, ಆಕರ್ಷಕ ಸಂಗೀತದ ಹಾರನ್‌ ಹೊಂದಿದ ಮತ್ತು ಸೈಲೆನ್ಸರ್‌ ವಿರೂಪ ಗೊಳಿಸಿ ಶಬ್ದ ಮಾಲಿನ್ಯಕ್ಕೆ ಕಾರಣವಾದ 1068 ವಾಹನಗಳು ಹಾಗೂ ಪರವಾನಗಿ ಅರ್ಹತಾ ಪತ್ರ ಹೊಂದಿರದ 262 ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಸ್ಥಳದಲ್ಲೇ 5.8 ಲಕ್ಷ ರೂ. ದಂಡ ಹಾಗೂ 14.70ಲಕ್ಷ ರೂ. ತೆರಿಗೆ ವಸೂಲಿ ಮಾಡಲಾಗಿದೆ. ನಿಗದಿಗಿಂತಲೂ ಹೆಚ್ಚು ಹಣ ವಸೂಲಿ ಮಾಡುತ್ತಿದ್ದ ಆಟೋ ಚಾಲಕರ ಮೇಲೆ ಕಾನೂನು ಮಾಪನ ಇಲಾಖೆ ಸಹಯೋಗದೊಂದಿಗೆ ದಾಳಿ ನಡೆಸಿ 27ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ.

ಕಿವಿಮಾತು : ಸಾರಿಗೆ ಇಲಾಖೆಯ ಅಧಿಕಾರಿಗಳು ಪ್ರತಿದಿನ ತಪಾಸಣೆ ನಡೆಸಲು ನಿರ್ಧರಿಸಿದ್ದು, ವಾಹನಗಳಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ವಾಹನ ಚಾಲಕರು ತಮ್ಮ ಬಳಿ ಇಟ್ಟುಕೊಳ್ಳುವುದು ಅತ್ಯಗತ್ಯ.
(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X