ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇಂಟ್‌ ಮೇರಿ ವಾರ್ಷಿಕ ಹಬ್ಬಕ್ಕೆ ನಗರದಲ್ಲಿ ಶುಭಾರಂಭ

By Staff
|
Google Oneindia Kannada News

ಸೇಂಟ್‌ ಮೇರಿ ವಾರ್ಷಿಕ ಹಬ್ಬಕ್ಕೆ ನಗರದಲ್ಲಿ ಶುಭಾರಂಭ
ಸೆ.8ನ್ನು ಮಹಿಳಾ ದಿನವನ್ನಾಗಿ ಆಚರಣೆ : ಧರ್ಮಾಧ್ಯಕ್ಷರ ಸಭೆ ನಿರ್ಧಾರ

ಬೆಂಗಳೂರು : ಸೇಂಟ್‌ ಮೇರಿಯ ಹತ್ತು ದಿನಗಳ ವಾರ್ಷಿಕ ಹಬ್ಬ ಸೋಮವಾರ(ಆ.30)ದಿಂದ ಆರಂಭವಾಗಿದೆ. ಶಿವಾಜಿನಗರದ ಸೇಂಟ್‌ ಮೇರಿ ಬೆಸಲಿಕಾ ಚರ್ಚ್‌ನಲ್ಲಿ ಧ್ವಜಾರೋಹಣದ ಮೂಲಕ ಉತ್ಸವಕ್ಕೆ ಚಾಲನೆ ದೊರೆತಿದೆ.

ಭಕ್ತರು ಏಸು ಮತ್ತು ಆರೋಗ್ಯ ಮಾತೆಗೆ ಹೂವು ಮತ್ತು ಮೋಂಬತ್ತಿ ಅರ್ಪಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ನಗರ ಧರ್ಮಾಧ್ಯಕ್ಷ ಡಾ.ಬರ್ನಾಡ್‌ ಮೊರಸ್‌, ಸೇಂಟ್‌ ಬೆಸೆಲಿಕಾ ಚರ್ಚ್‌ನ ಧರ್ಮಗುರು ಫಾ.ಜಗಮಾಲೆ ಹಾಜರಿದ್ದರು.

ಉತ್ಸವದ ಹಿನ್ನೆಲೆಯಲ್ಲಿ ಹತ್ತುದಿನಗಳ ಕಾಲ ಶಿವಾಜಿನಗರದಲ್ಲಿ ಜನದಟ್ಟಣೆ ಮತ್ತಷ್ಟು ಹೆಚ್ಚಾಗಲಿದೆ.

ಮಹಿಳಾ ದಿನ : ಮೇರಿ ಮಾತೆಯ ಜನ್ಮದಿನದ ಅಂಗವಾಗಿ ಆರೋಗ್ಯ ಮಾತೆಯ ಹಬ್ಬವನ್ನು ಜಗತ್ತಿನಾದ್ಯಂತ ಸೆ.8ರಂದು ಆಚರಿಸಲಾಗುತ್ತದೆ. ಭಾರತದಾದ್ಯಂತ ಈ ಹಬ್ಬವನ್ನು ಹೆಣ್ಣುಮಕ್ಕಳ ದಿನಾಚರಣೆಯಾಗಿ ಆಚರಿಸಲು ಭಾರತ ರಾಷ್ಟ್ರೀಯ ಧರ್ಮಾಧ್ಯಕ್ಷರ ಸಭೆ ತೀರ್ಮಾನಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X