ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್‌ಜೆಡಿ ಅಧ್ಯಕ್ಷರಾಗಿ ಲಾಲೂ ಪ್ರಸಾದ್‌ ಮರುಆಯ್ಕೆ

By Staff
|
Google Oneindia Kannada News

ಆರ್‌ಜೆಡಿ ಅಧ್ಯಕ್ಷರಾಗಿ ಲಾಲೂ ಪ್ರಸಾದ್‌ ಮರುಆಯ್ಕೆ
ಐದನೇ ಬಾರಿಗೆ ಅಧ್ಯಕ್ಷ ಸ್ಥಾನ, ಲಾಲೂ ಈಸ್‌ ಗ್ರೇಟ್‌!!!

ಪಟ್ನ : ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್‌ ಯಾದವ್‌ ಅವರು, ಪಕ್ಷದ ಅಧ್ಯಕ್ಷರಾಗಿ ಐದನೇ ಬಾರಿಗೆ ಸೋಮವಾರ ಮರು ಆಯ್ಕೆಯಾಗಿದ್ದಾರೆ.

ಪಕ್ಷದ ರಾಷ್ಟ್ರೀಯ ಸಮಿತಿ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಲಾಲೂ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಈ ಚುನಾವಣೆಗೆ ಅವರು ಆ.24ರಂದು ತಮ್ಮ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದರು.

ಮಾಜಿ ಮುಖ್ಯಮಂತ್ರಿ ರಾಬ್ರಿದೇವಿ, ಆರ್‌ಜೆಡಿಗೆ ಸೇರಿದ ಕೇಂದ್ರ ಸಚಿವ ರಘುವಂಶ್‌ ಪ್ರಸಾದ್‌ ಸಿಂಗ್‌, ಪ್ರೇಮ್‌ ಗುಪ್ತಾ ಮತ್ತು ಜೈಪ್ರಕಾಶ್‌ ನಾರಾಯಣ್‌ ಯಾದವ್‌, ಬಿಹಾರ ಘಟಕದ ಅಧ್ಯಕ್ಷ ಸೇರಿದಂತೆ ಪಕ್ಷದ ವಿವಿಧ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X