ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬ್ಬಬ್ಬಾ! ಎನ್ನುವಂತಿತ್ತು ‘ಧರ್ಮ’ ಪುತ್ರನ ವಿವಾಹ

By Staff
|
Google Oneindia Kannada News

ಅಬ್ಬಬ್ಬಾ! ಎನ್ನುವಂತಿತ್ತು ‘ಧರ್ಮ’ ಪುತ್ರನ ವಿವಾಹ
ಗುಲ್ಬರ್ಗ ಜಿಲ್ಲೆಯಲ್ಲಿ ಇತಿಹಾಸ ನಿರ್ಮಿಸಿದ ಅದ್ಧೂರಿ ಮದುವೆ

ಗುಲ್ಬರ್ಗ : ಮುಖ್ಯಮಂತ್ರಿ ಧರ್ಮಸಿಂಗ್‌ ಅವರ ಪುತ್ರನ ವಿವಾಹ ಗುಲ್ಬರ್ಗ ಜಿಲ್ಲೆಯ ಮಟ್ಟಿಗೆ ಇತಿಹಾಸ ಬರೆದಿದೆ. ಲಕ್ಷಾಂತರ ಮಂದಿ ದೊರೆ ಮಗನ ಮದುವೆ ಎಂಬ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

11 ಮಂದಿ ಸಚಿವರು, ಕರ್ನಾಟಕದ ರಾಜ್ಯಪಾಲ ಚತುರ್ವೇದಿ ಸೇರಿದಂತೆ ಇಬ್ಬರು ರಾಜ್ಯಪಾಲರು, ರಾಜಕಾರಣಿಗಳು, ಚಿತ್ರನಟರು, ಅಧಿಕಾರಿಗಳು ಹೀಗೆ ಒಂದು ಅರ್ಥದಲ್ಲಿ ಸರ್ಕಾರವೇ ಗುಲ್ಬರ್ಗಕ್ಕೆ ವಲಸೆ ಬಂದಿತ್ತು. ಮುಖ್ಯಮಂತ್ರಿಗಳ ಪುತ್ರ ಡಾ। ಅಜಯ್‌ಸಿಂಗ್‌ ಅವರು ಶ್ವೇತಾ ಅವರನ್ನು ಬುಧವಾರ ವರಿಸಿದರು.

ಶರಣಬಸವೇಶ್ವರ ಸಂಸ್ಥಾನದ ಶ್ರೀ ಶರಣಬಸಪ್ಪ ಅಪ್ಪ, ಜಿಡಗಾ ಮಠದ ಶ್ರೀ ಮುರುಘರಾಜೇಂದ್ರ ಸ್ವಾಮಿಗಳು, ನಾಲ್ವಾರ ಮಠದ ಶ್ರೀ ತೋಟೇಂದ್ರ ಶ್ರೀಗಳು, ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಶ್ರೀಗಳು, ಖಾಜಾ ಬಂದೇ ನವಾಜ್‌ ದರ್ಗಾದ ಉಲ್‌ ಹುಸೇನ್‌ಸಾಬ್‌ ಮೊದಲಾದ ಧಾರ್ಮಿಕ ಗುರುಗಳು ನವದಂಪತಿಗಳನ್ನು ಆಶೀರ್ವದಿಸಿದರು.

DR.ajay sigh weds sweethaಆಂಧ್ರದ ರಾಜ್ಯಪಾಲ ಸುಶೀಲಕುಮಾರ ಶಿಂಧೆ, ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ್‌, ಎಚ್‌.ಡಿ.ರೇವಣ್ಣ, ಮಲ್ಲಿಕಾರ್ಜುನ ಖರ್ಗೆ, ಸಂಸದ ಇಕ್ಬಾಲ್‌ ಅಹಮ್ಮದ ಸರಡಗಿ, ಬಿಜೆಪಿಯ ಪ್ರತಿಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ, ಶಾಸಕ ರಾಮಚಂದ್ರೇಗೌಡ, ಎಚ್‌.ಡಿ. ಕುಮಾರಸ್ವಾಮಿ, ಸಂಸದ ನಟ ಅಂಬರೀಶ್‌, ವಾಟಾಳ್‌ ನಾಗರಾಜ್‌ ಸೇರಿದಂತೆ ವಿವಿಧ ರಾಜಕೀಯ ಮುಖಂಡರು ರಾಜಕೀಯ ಮರೆತು, ಒಂದೇ ವೇದಿಕೆಯಲ್ಲಿದ್ದರು.

ಜೋಳದ ರೊಟ್ಟಿ, ಎಣಗಾಯಿ ಪಲ್ಯ, ಮುದ್ದಿಪಲ್ಯ, ಶೇಂಗಾ ಚಟ್ನಿ, ಅನ್ನ, ಪಲಾವ್‌, ತಿಳಿಸಾರು, ಮೊಸರು, ಸಲಾಡ್‌, ಎರಡು ಬಗೆಯ ಸಿಹಿ ತಿಂಡಿಗಳು ಭೋಜನಪ್ರಿಯರನ್ನು ಮದುವೆಯಲ್ಲಿ ತೃಪ್ತಿ ಪಡಿಸಿದವು.

ವಿವಾಹಕ್ಕೆ ಆಗಮಿಸುವವರಿಗೆ ಪೂರಕವಾಗುವಂತೆ ಉದ್ಯಾನ್‌ ಹಾಗೂ ಕರ್ನಾಟಕ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಎರಡೆರಡು ಪ್ರತ್ಯೇಕ ಬೋಗಿಗಳನ್ನು ಒದಗಿಸಲಾಗಿತ್ತು. ಪತ್ರಕರ್ತರಿಗೆ ಮತ್ತು ವಿಶೇಷ ಅತಿಥಿಗಳಿಗೆ ವಿಶೇಷ ಆತಿಥ್ಯವನ್ನು ನೀಡಲಾಯಿತು.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X