ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ಯದಲ್ಲಿಯೇ 1000 ಎಸ್‌ಡಿಎ ಹುದ್ದೆಗಳ ಭರ್ತಿ

By Staff
|
Google Oneindia Kannada News

ಸದ್ಯದಲ್ಲಿಯೇ 1000 ಎಸ್‌ಡಿಎ ಹುದ್ದೆಗಳ ಭರ್ತಿ
ರಾಜ್ಯದ 532 ಕೇಂದ್ರಗಳಲ್ಲಿ ಸೆ.25ರಂದು ಎಫ್‌ಡಿಎ ಲಿಖಿತ ಪರೀಕ್ಷೆ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ಪ್ರಥಮ ದರ್ಜೆ ಸಹಾಯಕರ ನೇಮಕಾತಿಗೆ ಸಂಬಂಧಿಸಿದ ಲಿಖಿತ ಪರೀಕ್ಷೆಯನ್ನು ಸೆಪ್ಟೆಂಬರ್‌ 25ರಂದು ನಡೆಸಲಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳ 532ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಒಂಬತ್ತು ವರ್ಷಗಳ ಬಳಿಕ ಪ್ರಥಮ ದರ್ಜೆ ಸಹಾಯಕ(ಎಫ್‌ಡಿಎ)ರ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, 700ಹುದ್ದೆ(532ರಿಂದ 700ಕ್ಕೆ ಹೆಚ್ಚಿಸಲಾಗಿದೆ)ಗಳಿಗೆ 1,96,854ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಭಾರೀ ಪೈಪೋಟಿ ನಡೆಯಲಿದೆ.

ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ಕಳುಹಿಸುವ ಪ್ರಕ್ರಿಯೆ ಆರಂಭವಾಗಿದೆ. ಸೆಪ್ಟೆಂಬರ್‌ 5ರ ಒಳಗೆ ಪ್ರವೇಶ ಪತ್ರ ತಲುಪದ ಅಭ್ಯರ್ಥಿಗಳು ಅರ್ಜಿಗೆ ಸಂಬಂಧಿಸಿದ ದಾಖಲೆಯಾಂದಿಗೆ ಆಯೋಗವನ್ನು ಸಂಪರ್ಕಿಸಬಹುದಾಗಿದೆ. ಸೆಪ್ಟೆಂಬರ್‌ನಲ್ಲಿ ಲಿಖಿತ ಪರೀಕ್ಷೆ ನಡೆಸಿ, ಅಕ್ಟೋಬರ್‌ನಲ್ಲಿ ಆಯ್ಕೆ ಪಟ್ಟಿ ಪ್ರಕಟಿಸಲಿದೆ.

ಎಸ್‌ಡಿಎ : ಅತಿ ಶೀಘ್ರದಲ್ಲಿಯೇ ಸುಮಾರು 1000ದ್ವಿತೀಯ ದರ್ಜೆ ಸಹಾಯಕರ ನೇಮಕಾತಿಗೆ ಅಧಿಸೂಚನೆ ಹೊರಬೀಳಲಿದೆ ಎಂದು ಕೆಪಿಎಸ್‌ಸಿ ಅಧ್ಯಕ್ಷ ಡಾ. ಎಚ್‌. ಎನ್‌.ಕೃಷ್ಣ ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಿರಸ್ಕೃತ ಅರ್ಜಿ ಮತ್ತಿತರ ಮಾಹಿತಿಗಾಗಿ ಸಂಪರ್ಕಿಸಿ : http://kpsc.kar.nic.in

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X