ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಂರ ಅತಿಯಾದ ಓಲೈಕೆಗೆ ತೊಗಾಡಿಯಾ ಗುರ್‌

By Staff
|
Google Oneindia Kannada News

ಮುಸ್ಲಿಂರ ಅತಿಯಾದ ಓಲೈಕೆಗೆ ತೊಗಾಡಿಯಾ ಗುರ್‌
ಪ್ರಚೋದನಕಾರಿ ಭಾಷಣದ ಹಿನ್ನೆಲೆ ತೊಗಾಡಿಯಾ-ಮುತಾಲಿಕ್‌ ಕೋರ್ಟ್‌ಗೆ ಹಾಜರು

ಬಿಜಾಪುರ : ಮುಸ್ಲಿಂ ಮತಬ್ಯಾಂಕ್‌ ಕೈಬಿಟ್ಟು , ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆ ಹತ್ತಿಕ್ಕುವ ಕಡೆ ಗಮನ ಹರಿಸಿ ಎಂದು ವಿಶ್ವ ಹಿಂದೂ ಪರಿಷತ್‌ ನಾಯಕ ಪ್ರವೀಣ್‌ಭಾಯಿ ತೊಗಾಡಿಯಾ ರಾಜಕೀಯ ಪಕ್ಷಗಳಿಗೆ ಕರೆ ನೀಡಿದ್ದಾರೆ.

ಈ ಕುರಿತು ಬುಧವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಜೆಹಾದಿಗಳು ಭಾರತವೂ ಸೇರಿದಂತೆ ಜಗತ್ತಿನ ಅನೇಕ ಭಾಗಗಳಲ್ಲಿ ತಮ್ಮ ಚಟುವಟಿಕೆಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಇಂತಹ ಚಟುವಟಿಕೆಗಳನ್ನು ತಡೆಯುವುದು ರಾಜಕೀಯ ಪಕ್ಷಗಳ ಆದ್ಯತೆಯಾಗಲಿ ಎಂದರು.

ವಿಶ್ವ ಹಿಂದೂ ಪರಿಷತ್‌ ಯಾವುದೇ ಸಮುದಾಯದ ವಿರುದ್ಧವಿಲ್ಲ, ಆದರೆ ಮಾನವೀಯತೆಗೆ ತೊಂದರೆಯಾಡ್ಡಿರುವ ಜೆಹಾದನ್ನು ವಿರೋಧಿಸುತ್ತದೆ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲ ರಾಜಕೀಯ ಪಕ್ಷಗಳು ಮುಸ್ಲಿಂ ಮತಬ್ಯಾಂಕ್‌ ಕೈಬಿಟ್ಟು , ಹಿಂದೂ ಸಮುದಾಯದ ಹಿತಾಸಕ್ತಿಯನ್ನು ಕಾಯಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಎಲ್‌.ಕೆ.ಅಡ್ವಾಣಿ ಜಿನ್ನಾ ಕುರಿತ ಆಡಿದ ಮಾತುಗಳ ಬಗ್ಗೆ ಕೇಳಿದಾಗ, ಜಿನ್ನಾ ಜಾತ್ಯತೀತ ಆಗಿದ್ದರೋ ಇಲ್ಲವೋ ಎನ್ನುವ ಅಂಶ ಮುಖ್ಯವಲ್ಲ. ಅವರು ದೇಶ ವಿಭಜನೆಯ ಕಾರಣಕರ್ತ ಎನ್ನುವುದು ಮುಖ್ಯವಾಗುತ್ತದೆ ಎಂದು ತೊಗಾಡಿಯಾ ಸ್ಪಷ್ಟಪಡಿಸಿದರು.

ತೊಗಾಡಿಯಾ-ಮುತಾಲಿಕ್‌ ಕೋರ್ಟ್‌ಗೆ ಹಾಜರು : 2004ರಲ್ಲಿ ಸಭೆಯಾಂದರಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂಬ ಆರೋಪ ಎದುರಿಸುತ್ತಿರುವ, ವಿಹಿಂಪ ನಾಯಕ ಪ್ರವೀಣ್‌ಭಾಯಿ ತೊಗಾಡಿಯಾ ಮತ್ತು ಬಜರಂಗದಳದ ನಾಯಕ ಪ್ರಮೋದ್‌ ಮುತಾಲಿಕ್‌ ಇಂದು ಜಿಲ್ಲಾ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಹಾಜರಾದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ಅಕ್ಟೋಬರ್‌ 29ಕ್ಕೆ ಮುಂದೂಡಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X