• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಶಾಂತಿ’ಯಾತ್ರೆ: ಮನೆ ಮುಂದೆ ಸಿನಿಮಾ ಜಾತ್ರೆ!

By Staff
|

‘ಶಾಂತಿ’ಯಾತ್ರೆ: ಮನೆ ಮುಂದೆ ಸಿನಿಮಾ ಜಾತ್ರೆ!

ಬರಗೂರು ರಾಮಚಂದ್ರಪ್ಪ ಅವರಿಂದ ‘ಸಮುದಾಯದತ್ತ ಸಿನಿಮಾ -ಶಾಂತಿ ಚಿತ್ರಯಾತ್ರೆ’

ಬೆಂಗಳೂರು : ಗಿನ್ನಿಸ್‌ ದಾಖಲೆ ನಿರ್ಮಿಸಿ, ಏಕ ಕಲಾವಿದ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾದ ‘ಶಾಂತಿ’ ಚಿತ್ರ ನಗರದ ಬಡಾವಣೆಗಳಲ್ಲಿ ‘ಸಮುದಾಯದತ್ತ ಸಿನಿಮಾ -ಶಾಂತಿ ಚಿತ್ರಯಾತ್ರೆ’ ಎಂಬ ಶೀರ್ಷಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ.

ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿರುವ ‘ಶಾಂತಿ’ ಚಿತ್ರದ ನಿರ್ದೇಶಕ ಬರಗೂರು ರಾಮಚಂದ್ರಪ್ಪ, ಚಿತ್ರ ಯಾತ್ರೆಯನ್ನು ಶುಕ್ರವಾರ(ಆ.19) ಸಂಜೆ 5ಗಂಟೆಗೆ ಬಾದಾಮಿ ಹೌಸ್‌ನಲ್ಲಿ ವಾರ್ತಾ ಸಚಿವ ಬಿ.ಶಿವರಾಂ ಉದ್ಘಾಟಿಸುವರು ಎಂದು ತಿಳಿಸಿದ್ದಾರೆ.

ನಿರ್ದೇಶಕ ಗಿರೀಶ್‌ ಕಾಸವರಳ್ಳಿ ಸಮಾರಂಭದ ಅಧ್ಯಕ್ಷತೆವಹಿಸುವರು. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಂದ್ರಶೇಖರ್‌ ಪಾಟೀಲ, ನಿರ್ದೇಶಕ ನಂಜುಂಡೇಗೌಡ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.

ಹಂಪಿನಗರ, ವಿಜಯನಗರ, ಇಂದಿರಾನಗರ, ಕನ್ನಡ ಭವನ, ಕಮಲಾನಗರ, ಹೆಸರಘಟ್ಟ, ಕೆಂಗೇರಿ ಉಪನಗರ, ಸೆಂಟ್ರಲ್‌ ಕಾಲೇಜು, ವರ್ತೂರು, ಮಾರತ್‌ ಹಳ್ಳಿ, ಮಾವಳ್ಳಿ, ಮಡಿವಾಳ, ಜ್ಞಾನಭಾರತಿ ಸಭಾಂಗಣ, ಗಂಗಾನಗರ, ಬಸವನಗುಡಿ, ಚೆನ್ನಮ್ಮನ ಕೆರೆ ಅಚ್ಚುಕಟ್ಟು, ಕಬ್ಬನ್‌ಪಾರ್ಕ್‌, ಶ್ರೀರಾಮಪುರ, ರವೀಂದ್ರಕಲಾಕ್ಷೇತ್ರಗಳಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ.

ಪ್ರದರ್ಶನದ ಬಗ್ಗೆ ಸಂಕ್ಷಿಪ್ತ ವಿವರ :

ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜ ಪೇಟೆ -ಆ.21ರ ಬೆಳಗ್ಗೆ 10.30ಕ್ಕೆ, ಸೆ.7ರ ಬೆಳಗ್ಗೆ 11ಕ್ಕೆ, ಸೆ.13ರ ಸಂಜೆ 6ಕ್ಕೆ

ಕನ್ನಡ ಭವನ, ಜೆ.ಸಿ.ರಸ್ತೆ -ಆ.24ರ ಬೆಳಗ್ಗೆ 11.30ಕ್ಕೆ, ಸೆಪ್ಟೆಂಬರ್‌ 6ರ ಸಂಜೆ 5ಕ್ಕೆ

ರವೀಂದ್ರ ಕಲಾಕ್ಷೇತ್ರದಲ್ಲಿ ಸೆ.17ರ ಬೆಳಗ್ಗೆ 11ಕ್ಕೆ

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more