ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.21ರಂದು ಬನವಾಸಿ ಬಳಗದಿಂದ ವೃತ್ತಿ ಮಾರ್ಗದರ್ಶನ

By Staff
|
Google Oneindia Kannada News

ಆ.21ರಂದು ಬನವಾಸಿ ಬಳಗದಿಂದ ವೃತ್ತಿ ಮಾರ್ಗದರ್ಶನ
ಉದ್ಯೋಗ ಬೇಟೆಗೆ ಸುಲಭ ಸೂತ್ರಗಳ ಅರಿಯಲು ಆ.19ರೊಳಗೆ ಹೆಸರು ನೋಂದಾಯಿಸಿ!

ಬೆಂಗಳೂರು : ಕನ್ನಡಪರ ಸಂಘಟನೆಯಾದ ಬನವಾಸಿ ಬಳಗವು ‘ವೃತ್ತಿ ಜೀವನ ಮಾರ್ಗದರ್ಶನ’ ಕಾರ್ಯಕ್ರಮವನ್ನು ಮೂರನೇ ಬಾರಿ ನಗರದಲ್ಲಿ ಆ.21ರ ಭಾನುವಾರ ಏರ್ಪಡಿಸಿದೆ.

ಆಸಕ್ತ ಅಭ್ಯರ್ಥಿಗಳು ಕೆಳಕಂಡ ವಿವರಗಳನ್ನು [email protected] ಇ-ಅಂಚೆ(ಇ-ಮೇಲ್‌) ವಿಳಾಸಕ್ಕೆ ಕಳುಹಿಸಿ ನೋಂದಾಯಿಸಿಕೊಳ್ಳಬೇಕು. ಪ್ರವೇಶ ಉಚಿತ!

ಈ ವಿವರಗಳು ಕಡ್ಡಾಯ :

1. ಹೆಸರು
2. ವಿದ್ಯಾರ್ಹತೆ
3. ಉತ್ತೀರ್ಣರಾದ ವರ್ಷ
4. ಹುಟ್ಟೂರು
5. ಬಿ.ಪಿ.ಒ./ನಾನ್‌-ಐ.ಟಿ. ಕರೀಯರ್‌ ಬಗ್ಗೆ ಆಸಕ್ತಿ ಇದೆಯೇ? (ಇದೆ/ಇಲ್ಲ)
6. ದೂರವಾಣಿ/ಮೊಬೈಲ್‌ ಸಂಖ್ಯೆ
7. ಈ ಕಾರ್ಯಕ್ರಮದ ಬಗ್ಗೆ ತಿಳಿದ ಬಗೆ: (ಇ-ಮೇಲ್‌/ಯಾಹೂ ಗ್ರೂಪ್‌/ವೆಬ್‌ ಸೈಟ್‌/ಸ್ನೇಹಿತರು/ಪತ್ರಿಕೆಗಳು)

ನೋಂದಣಿ ಕಡ್ಡಾಯ. ಮೊದಲು ಬಂದವರಿಗೆ ಆದ್ಯತೆ. ನೋಂದಾಯಿಸಿಕೊಳ್ಳಲು ಕಡೆ ದಿನಾಂಕ ಆಗಸ್ಟ್‌ 19. ಹಿಂದಿನ ಕಾರ್ಯಕ್ರಮಗಳಿಗೆ ಆಗಮಿಸಿದ್ದ ಅಭ್ಯರ್ಥಿಗಳೂ ಸಹ ಭಾಗವಹಿಸಬಹುದು.

ಕಾರ್ಯಕ್ರಮ ನಡೆಯುವ ಸ್ಥಳ, ಅದರ ನಕ್ಷೆ ಹಾಗೂ ಸಮಯದ ಬಗ್ಗೆ ನೋಂದಾಯಿಸಿದ ಅಭ್ಯರ್ಥಿಗಳಿಗೆ ಈ-ಮೇಲ್‌ ಮೂಲಕ ತಿಳಿಸಲಾಗುವುದು. ಕಾರ್ಯಕ್ರಮವು ಸಂಪೂರ್ಣವಾಗಿ ಕನ್ನಡದಲ್ಲಿರುತ್ತದೆ.

ಈ ಬಾರಿ ಚರ್ಚಿಸುವ ಮುಖ್ಯ ವಿಷಯಗಳು :

- ವೈಯಕ್ತಿಕ ವಿವರದ ನಮೂನೆ(ಸಿ.ವಿ./ರೆಸ್ಯೂಮ್‌ ಫಾರ್ಮಾಟ್‌)
- ಹೆಚ್‌. ಆರ್‌. ಸಂದರ್ಶನ - ಮಾರ್ಗದರ್ಶನ ಮತ್ತು ಅಣುಕು ಸಂದರ್ಶನ
- ಸಾಮರ್ಥ್ಯ ಪರೀಕ್ಷೆ (ಆಪ್ಟಿಟ್ಯೂಡ್‌ ಟೆಸ್ಟ್‌) - ಅಣುಕು ಪರೀಕ್ಷೆ ಹಾಗೂ ಉತ್ತರಗಳ ವಿವರಣೆ
- ಜಾವ/ಜೆ2ಇಇ - ಸಂದರ್ಶನ ತಯಾರಿ, ವಿವಿಧ ವೃತ್ತಿ ಮಾರ್ಗಗಳು
- ಸಾಫ್ಟ್‌ ವೇರ್‌ ಟೆಸ್ಟಿಂಗ್‌ ವೃತ್ತಿ - ಸಂದರ್ಶನ ತಯಾರಿ, ವಿವಿಧ ವೃತ್ತಿ ಮಾರ್ಗಗಳು
- ವ್ಯಕ್ತಿತ್ವ ಬೆಳವಣಿಗೆ (ಪರ್ಸನಾಲಿಟಿ ಡೆವೆಲಪ್‌ ಮೆಂಟ್‌)
- ಗುಂಪು ಚರ್ಚೆ (ಗ್ರೂಪ್‌ ದಿಸ್ಕಶನ್‌) ಮಾರ್ಗದರ್ಶನ ಮತ್ತು ಅಣುಕು ಚರ್ಚೆ
- ಬಿ.ಪಿ.ಒ. ಕರೀಯರ್‌ ಮಾರ್ಗದರ್ಶನ
- ಹೊಸ ತಂತ್ರಜ್ಞಾನಗಳು (ಹಾಟ್‌ ಟೆಕ್ನಾಲಜಿಸ್‌) - ಪರಿಚಯ ಹಾಗೂ ಮಾರ್ಗದರ್ಶನ
- ಆರ್‌.ಡಿ.ಬಿ.ಎಮ್‌.ಎಸ್‌. (ರಿಲೇಶನಲ್‌ ಡೇಟಾಬೇಸ್‌)
- ವಿ.ಎಲ್‌.ಎಸ್‌.ಐ/ಎಲೆಕ್ಟ್ರಾನಿಕ್ಸ್‌ ಬೇಸಿಕ್ಸ್‌ - ಸಂದರ್ಶನ ತಯಾರಿ ಹಾಗೂ ಮಾರ್ಗದರ್ಶನ

(ಇನ್ಫೋ ವಾರ್ತೆ)


ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X