ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಗಿಭದ್ರತೆ ನಡುವೆ ಸ್ವಾತಂತ್ರ್ಯೋತ್ಸವ!

By Staff
|
Google Oneindia Kannada News

ಬಿಗಿಭದ್ರತೆ ನಡುವೆ ಸ್ವಾತಂತ್ರ್ಯೋತ್ಸವ!
59ನೇ ಸ್ವಾತಂತ್ರ್ಯದಿನಾಚರಣೆಯ ಸಂಭ್ರಮ ದೇಶದಲ್ಲಿ ಕಾಣಿಸುತ್ತಿದೆ. ಅದರೊಂದಿಗೆ ಉಗ್ರರು ಕುಕೃತ್ಯಗಳ ನಡೆಸಬಹುದೆಂಬ ಆತಂಕವೂ ಮನದೊಳಗಿದೆ...

  • ದಟ್ಸ್‌ಕನ್ನಡ ಡೆಸ್ಕ್‌
ಬೆಳಗ್ಗೆ ಬೇಗನೆ ಎದ್ದು, ಸ್ನಾನಮಾಡಿ ಸಮವಸ್ತ್ರ ಧರಿಸಿ, ಕೈಯಲ್ಲಿ ಭಾರತದ ಧ್ವಜ ಹಿಡಿದು ಶಾಲೆಯೆಡೆಗೆ ಧಾವಿಸುತ್ತಿರುವ ಮಕ್ಕಳನ್ನು ನೋಡುತ್ತಿದ್ದರೆ, ಒಂದು ಕ್ಷಣ ನಾವೆಲ್ಲ ಮತ್ತೊಮ್ಮೆ ನಮ್ಮ ಬಾಲ್ಯದ ದಿನಗಳತ್ತ ಮುಖಮಾಡುತ್ತೇವಲ್ಲವೇ?

ದೇಶ ಮತ್ತೊಂದು ಸ್ವಾತಂತ್ರ್ಯೋತ್ಸವಕ್ಕೆ ಅಣಿಯಾಗುತ್ತಿದೆ. ಎಲ್ಲಿ ನೋಡಿದರೂ ತ್ರಿವರ್ಣ ಧ್ವಜಗಳೇ...ಎಂದಿನಂತೆಯೇ ಮಕ್ಕಳು ಸ್ವಾತಂತ್ರ್ಯ ದಿನಾಚರಣೆಯ ಪ್ರಭಾತ್‌ ಫೇರಿಯಲ್ಲಿ ಪಾಲ್ಗೊಳ್ಳುತ್ತಾರೆ. ಭಾಷಣಗಳು ವೇದಿಕೆಯಿಂದ ಪುಂಗಾನುಪುಂಗವಾಗಿ ಹೊರಬರುತ್ತವೆ. ಕೈಯಲ್ಲಿ ಮಿಠಾಯಿ ಹಿಡಿದು ಮಗು ಮನೆಯತ್ತ ಧಾವಿಸುತ್ತದೆ... ಟಿ.ವಿಗಳಲ್ಲಿ ದೇಶ ಪ್ರೇಮದ ಹಾಡು, ಸಿನಿಮಾ...ಅದೇ ಕಾರ್ಯಕ್ರಮಗಳು.

ಮಕ್ಕಳಲ್ಲಿ ‘ನಾವು ಎಳೆಯರು ನಾವು ಗೆಳೆಯರು ಹೃದಯ ಹೂವಿನ ಮಂದಿರ ನಾಳೆ ನಾವೆ ನಾಡ ಹಿರಿಯರು ನಮ್ಮ ಕನಸದು ಸುಂದರ ’ ಎಂಬ ನಿತ್ಯಸತ್ಯ ಭಾವವನ್ನು ಉದ್ದೀಪನಗೊಳಿಸುವುದೇ ಈ ರಾಷ್ಟ್ರೀಯ ಹಬ್ಬದ ಘನ ಉದ್ದೇಶ. ಮಕ್ಕಳ ಮನದಲ್ಲಿ ಬಾಲ್ಯದಲ್ಲಿ ಮೊಳೆತ ಈ ಭಾವನೆ, ಮುಂದೆ ದೇಶಪ್ರೇಮಿಯಾಗಿ, ವಿಶ್ವಕುಟುಂಬಿಯಾಗಿ ಬಾಳುವಂತಹ ವಿಸ್ತಾರವಾದ ಹಾಗೂ ಸಹಜವಾದ ವ್ಯಕ್ತಿತ್ವವನ್ನು ರೂಪಿಸುತ್ತದೆ. ಆದರೆ ನಂತರ...

ಈ ಆಚರಣೆಯ ಮೂಲ ಆಶಯ, ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ, ಹೋರಾಟ ನಡೆಸಿದ ಮಹಾಚೇತನಗಳ ಸ್ಮರಣೆ. ಆನಂತರ ತ್ಯಾಗ, ಬಲಿದಾನ, ಹೋರಾಟಗಳಿಂದ ದೊರೆತ ಸ್ವಾತಂತ್ರವನ್ನು ಹೇಗೆ ಬಳಸಿಕೊಂಡಿದ್ದೇವೆ, ಹೇಗೆ ಉಳಿಸಿಕೊಳ್ಳಬೇಕು ಎಂಬ ಮೌಲ್ಯಮಾಪನ. ಆದರೆ ಇವೆಲ್ಲವೂ ಆಗುತ್ತಿವೆಯೇ?

ಜನರಲ್ಲಿ ಒಂದೆಡೆ ಹಬ್ಬದ ಸಡಗರ ಆವರಿಸಿದರೂ, ಇನ್ನೊಂದೆಡೆ ಉಗ್ರರ ದಾಳಿಯ ಭಯ. ಉಗ್ರರು ಬಾಂಬ್‌ ದಾಳಿಯ ಬೆದರಿಕೆಯಾಡ್ಡಿರುವ ಹಿನ್ನೆಲೆಯಲ್ಲಿ ನಗರದ ವಿಮಾನ ನಿಲ್ದಾಣ, ಬಸ್‌ ನಿಲ್ದಾಣ, ರೈಲ್ವೇ ನಿಲ್ದಾಣ, ಮಾಣಿಕ್‌ ಶಾ ಪರೇಡ್‌ ಮೈದಾನ, ರಾಜಭವನ, ರವೀಂದ್ರ ಕಲಾಕ್ಷೇತ್ರ ಮುಂತಾದೆಡೆ ವ್ಯಾಪಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ರಾಜ್ಯದ ಮುಖ್ಯಮಂತ್ರಿ ಧರ್ಮಸಿಂಗ್‌ ಅವರು ಮಾಣಿಕ್‌ ಶಾ ಮೈದಾನದಲ್ಲಿ ಧ್ವಜಾರೋಹಣ ಮಾಡಿ ಮಾತಾಡಲಿದ್ದಾರೆ. ಅವರ ಜೊತೆಯಲ್ಲಿ ಅವರ ಸಂಪುಟ ಸಹೋದ್ಯೋಗಿಗಳು ಭಾಗವಹಿಸಲಿದ್ದಾರೆ. ಈ ನಿಮಿತ್ತ ಅನೇಕ ಸಾಂಸ್ಕೃತಿಕ-ಮನರಂಜನಾ ಕಾರ್ಯಕ್ರಮಗಳು ಜರುಗಲಿವೆ.

ಇನ್ನು ದೆಹಲಿಯಲ್ಲಿ ನಡೆಯಲಿರುವ ಸ್ವಾತಂತ್ರೋತ್ಸವ ಕಾರ್ಯಕ್ರಮವೂ ತನ್ನದೇ ವೈಶಿಷ್ಟ್ಯ ಹೊಂದಿದೆ. ಆದರೆ ಅಲ್ಲಿಯೂ ಭಯೋತ್ಪಾದಕರ ದಾಳಿಯ ಆತಂಕವಿದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಭಾರೀ ಭದ್ರತೆಯನ್ನು ವಹಿಸಲಾಗಿದೆ. ಹಿಂದೊಂದು ಸಲ ಸಂಸತ್‌ ಭವನದ ಮೇಲೆ ದಾಳಿ ನಡೆದಿದ್ದರಿಂದ ಜಾಗೃವಾಗಿರಬೇಕಾಗಿದೆ. ಭಯೋತ್ಪಾದನೆಯನ್ನು ವ್ಯವಸ್ಥಿತವಾಗಿ ಮಟ್ಟಹಾಕುವುದಕ್ಕೆ ವಿಶ್ವ ಸಮುದಾಯ ಒಂದಾಗುತ್ತಿದೆ. ಭಾರತವೂ ಅದರಲ್ಲಿ ಅನನ್ಯ ಪಾತ್ರ ನಿರ್ವಹಿಸುತ್ತಿದೆ.

ಪ್ರಧಾನ ಮಂತ್ರಿ ಐತಿಹಾಸಿಕ ಕೆಂಪುಕೋಟೆಯ ಮೇಲೆ ನಿಂತು ಮಾಡುವ ಭಾಷಣಕ್ಕೆ ವಿಶಿಷ್ಟ ಮಹತ್ವವಿದೆ. ಈ ನಿಮಿತ್ತ ನಡೆಯುವ ಸಮಾರಂಭದಲ್ಲಿ ದೇಶದ ಮಿಲಿಟರಿ ಶಕ್ತಿಯನ್ನು ಸ್ವಲ್ಪ ಮಟ್ಟಿಗಾದರೂ ಸಾಕ್ಷಾತ್‌ ಕಾಣಬಹುದು. ಈ ಹಬ್ಬದ ಸಂಭ್ರಮದಲ್ಲಿ ದೇಶ ಇನ್ನಷ್ಟು, ಮತ್ತಷ್ಟು ಸಾಧನೆಗೈದು ಉನ್ನತಿಯ ಪಥದತ್ತ ನಿರಂತರ ಊರ್ಧ್ವಮುಖವಾಗಿ ಚಲಿಸಲಿ ಎಂದು ಪ್ರತಿಯಾಬ್ಬ ಭಾರತೀಯನ ಹೃದಯ ಮಿಡಿಯುತ್ತದೆ...ಹಾಗೆಯೇ ಮಿಡಿಯಬೇಕು...

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X