ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವ ಇಚ್ಚೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ -ಟೈಟ್ಲರ್‌

By Staff
|
Google Oneindia Kannada News

ಸ್ವ ಇಚ್ಚೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ -ಟೈಟ್ಲರ್‌
ನಾನಾವತಿ ವರದಿಯ ಹಿನ್ನೆಲೆ 1984ರ ಸಿಖ್‌ ಹತ್ಯಾಕಾಂಡದ ಪ್ರಕರಣ ಮರು ತನಿಖೆಗೆ ಪ್ರಧಾನಿ ಅಸ್ತು

ನವದೆಹಲಿ : ನಾನಾವತಿ ಆಯೋಗದ ತನಿಖಾ ವರದಿಯ ಹಿನ್ನೆಲೆಯಲ್ಲಿ ಒತ್ತಡ ತೀವ್ರಗೊಂಡದ್ದರಿಂದ ಕೇಂದ್ರ ಅನಿವಾಸಿ ಭಾರತೀಯರ ವ್ಯವಹಾರಗಳ ಸಚಿವ ಜಗದೀಶ್‌ ಟೈಟ್ಲರ್‌ ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬುಧವಾರ ರಾತ್ರಿ ರಾಜೀನಾಮೆ ಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1984ರ ಸಿಖ್‌ವಿರೋಧಿ ದಂಗೆಯ ಪ್ರಕರಣದಲ್ಲಿ ತಮ್ಮ ಹೆಸರಿಗೆ ಕಳಂಕ ಅಂಟಿಕೊಂಡಿದೆ. ಅದರ ನಿವಾರಣೆಯಾಗುವ ತನಕ ಅಧಿಕಾರದಲ್ಲಿರಲು ಮನಸ್ಸಿಲ್ಲದ ಕಾರಣ ಸ್ವಇಚ್ಛೆಯಿಂದ ರಾಜೀನಾಮೆ ಸಲ್ಲಿಸಿದ್ದೇನೆ ಎಂದಿದ್ದಾರೆ.

ಇಂದಿರಾ ಗಾಂಧಿ ಹತ್ಯೆಯ ನಂತರ ನಡೆದಿದ್ದ ಸಿಖ್‌ವಿರೋಧಿ ದಂಗೆಯ ತನಿಖೆ ನಡೆಸಲು ಹಿಂದಿನ ಎನ್‌ಡಿಎ ಸರ್ಕಾರ ನಾನಾವತಿ ಆಯೋಗವನ್ನು ರಚಿಸಿತ್ತು. ಆ ವರದಿಯಲ್ಲಿ ಟೈಟ್ಲರ್‌ ಪಾತ್ರವನ್ನು ವಿವರಿಸಲಾಗಿತ್ತು. ಅವರ ವಿರುದ್ಧ ಕ್ರಮ ಜರುಗಿಸಲು ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ತೀವ್ರ ಹೋರಾಟ ನಡೆಸಿದ್ದವು.

ಮತ್ತೆ ಜೀವ : ಪ್ರತಿಪಕ್ಷಗಳ ಮತ್ತು ಮಿತ್ರ ವಾಮಪಕ್ಷಗಳ ಒತ್ತಡಕ್ಕೆ ಮಣಿದ ಪ್ರಧಾನಿ ಮನಮೋಹನ್‌ ಸಿಂಗ್‌ ನಾನಾವತಿ ವರದಿಯಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿರುವ ಪ್ರಕರಣಗಳ ಮರುತನಿಖೆಗೆ ಮತ್ತು ಮರುಪರಿಶೀಲನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X